Advertisement

ಆರ್‌ಬಿಐನ ಗ್ರಾಹಕ ಕೇಂದ್ರಿತ ಯೋಜನೆಗಳಿಂದ ಆರ್ಥಿಕತೆಗೆ ಬಲ

11:12 PM Nov 12, 2021 | Team Udayavani |

ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ 2 ಗ್ರಾಹಕ ಕೇಂದ್ರಿತ ಯೋ ಜನೆ ಗಳಾದ ರಿಟೇಲ್‌ ಡೈರೆಕ್ಟ್ ಸ್ಕೀಮ್‌ ಮತ್ತು ಏಕೀಕೃತ ಒಂಬುಡ್ಸ್‌ಮನ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿ ದ್ದಾರೆ. ಇದರಿಂದ ಹೂಡಿಕೆಯ ಹಾದಿಗಳು ಇನ್ನಷ್ಟು ಹೆಚ್ಚಲಿದೆಯಲ್ಲದೆ ಬಂಡವಾಳ ಮಾರುಕಟ್ಟೆ ಇನ್ನಷ್ಟು ಸುಲಭ ಮತ್ತು ಸುರಕ್ಷಿತವಾಗಲಿದೆ.

Advertisement

ರಿಟೇಲ್‌ ಡೈರೆಕ್ಟ್ ಸ್ಕೀಂನಡಿಯಲ್ಲಿ ಸಣ್ಣ ಹೂಡಿಕೆದಾರರು ಆನ್‌ಲೈನ್‌ನಲ್ಲಿ  ಸುರಕ್ಷಿತವಾಗಿ ಸರಕಾರದ ಸೆಕ್ಯುರಿಟೀಸ್‌ ಖಾತೆಯನ್ನು ಆರ್‌ಬಿಐ ನಲ್ಲಿ  ನಿರ್ವಹಿಸಲು ಸಾಧ್ಯವಾಗಲಿದೆ. ಇನ್ನು ಏಕೀಕ ‌ೃತ ಒಂಬುಡ್ಸ್‌ಮನ್‌ ಯೋಜನೆಯಡಿಯಲ್ಲಿ ಗ್ರಾಹಕರು ಹೂಡಿಕೆಗೆ ಸಂಬಂಧಿಸಿದಂತೆ ಅರ್ಜಿ, ದಾಖಲೆಗಳನ್ನು ಸಲ್ಲಿಸಲು, ತಮ್ಮ ಅರ್ಜಿಯ ಸ್ಥಿತಿಗತಿಯನ್ನು ತಿಳಿದು ಕೊಳ್ಳಲು ಸಾಧ್ಯವಾಗಲಿದೆ. ಅಷ್ಟು ಮಾತ್ರವಲ್ಲದೆ ಹೂಡಿಕೆಗೆ ಸಂಬಂಧಿಸಿದ ಯಾವುದೇ ದೂರು, ಅಹವಾಲುಗಳನ್ನು ಸಲ್ಲಿ ಸಲು ಈ ಹೊಸ ವ್ಯವಸ್ಥೆ ಅವಕಾಶ ಕಲ್ಪಿಸಿಕೊಡಲಿದೆಯಲ್ಲದೆ ಈ ದೂರು ಗಳ ವಿಲೇವಾರಿ ಕೂಡ ಸುಲಭ ಸಾಧ್ಯವಾಗಲಿದೆ. ಆರ್‌ಬಿಐ ನಿಯಂ ತ್ರಣದಲ್ಲಿರುವ ವ್ಯವಸ್ಥೆಗಳ ವಿರುದ್ಧ ಯಾವುದೇ ದೂರಿನ ಸಲ್ಲಿಕೆ ಮತ್ತು ಇತ್ಯರ್ಥಕ್ಕೆ ಈ ಏಕಗವಾಕ್ಷಿ ವ್ಯವಸ್ಥೆ ಅನುಕೂಲಕಾರಿಯಾಗಿದೆ.

ರಿಟೇಲ್‌ ಡೈರೆಕ್ಟ್ ಸ್ಕೀಂನ ಜಾರಿಯ ಮೂಲಕ ಆರ್‌ಬಿಐ ಸಣ್ಣ ಹೂಡಿಕೆ ದಾರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದೆ. ಇದರಿಂದ ಸರಕಾರದ ಬಾಂಡ್‌ ಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯ ವಾಗಲಿದೆ. ಸಣ್ಣ ಹೂಡಿಕೆದಾರರು ಕೂಡ ಸರಕಾರದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಲಭ್ಯವಾಗಿದೆ. ಇದರಿಂದ ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಬಂಡವಾಳ ಹರಿದು ಬರಲಿದ್ದು ಒಟ್ಟಾರೆ ಆರ್ಥಿಕತೆಯ ದೃಷ್ಟಿಯಿಂದ ಉತ್ತೇಜನಕಾರಿ ಕ್ರಮ ವಾಗಿದೆ. ದೇಶದ ಆರ್ಥಿಕತೆ ಮಾತ್ರವಲ್ಲದೆ ಒಟ್ಟಾರೆ ಪ್ರಗತಿಯಲ್ಲಿಯೂ ಸಣ್ಣ ಹೂಡಿಕೆ ದಾರರು ಕೂಡ ಪಾಲುದಾರಿಕೆಯನ್ನು ಹೊಂದಲು ಆರ್‌ಬಿಐನ ಈ ಯೋಜನೆ ಅವಕಾಶ ಮಾಡಿಕೊಡಲಿದೆ. ಈ ಸ್ಕೀಂನಿಂದ ಸರಕಾರದ ಸೆಕ್ಯುರಿಟೀಸ್‌ನಲ್ಲಿ ಹೂಡಿಕೆ ಮಾಡಲು ಮಧ್ಯಮ ವರ್ಗ, ಉದ್ಯೋಗಿಗಳು, ಸಣ್ಣ ಉದ್ಯಮಿಗಳು ಮತ್ತು ಹಿರಿಯ ನಾಗರಿಕರಿಗೆ ಅತೀ ಸರಳ, ಸುಲಭ ಮತ್ತು ಅತ್ಯಂತ ಸುರಕ್ಷಿತ ವಿಧಾನವಾಗಿದೆ.

ಯಾವುದೇ ವ್ಯವಸ್ಥೆಯಲ್ಲಿ ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಸಾರ್ವ ಜನಿಕರ ದೂರು ಮತ್ತು ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವುದು ಹೆಚ್ಚಿನ ಪ್ರಾಧಾನ್ಯವನ್ನು ಪಡೆದುಕೊಂಡಿದ್ದು ಈ ನಿಟ್ಟಿನಲ್ಲಿ ಆರ್‌ಬಿಐ ಜಾರಿ ಗೊಳಿಸಿರುವ ಏಕೀಕೃತ ಒಂಬುಡ್ಸ್‌ಮನ್‌ ವ್ಯವಸ್ಥೆ ದಿಟ್ಟ ಹೆಜ್ಜೆಯಾಗಿದೆ.  ಆರ್‌ಬಿಐ ಇದೀಗ ಜಾರಿಗೆ ತಂದಿರುವ ಈ ಎರಡೂ ಗ್ರಾಹಕ ಕೇಂದ್ರಿತ ಯೋಜನೆಗಳು ತಂತ್ರಜ್ಞಾನ ಅವಲಂಬಿತವಾಗಿದ್ದು ಇದರಿಂದ ದಕ್ಷತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ.  ಕೊರೊ ನೋತ್ತರ ಕಾಲಘಟ್ಟದಲ್ಲಿ ಕೇಂದ್ರ ಸರಕಾರ ಮತ್ತು ಆರ್‌ಬಿಐ ತಮ್ಮತಮ್ಮ ವ್ಯಾಪ್ತಿಯಲ್ಲಿ ಕೈಗೊಂಡ ಸುಧಾರಣ ಉಪಕ್ರಮಗಳಿಂದಾಗಿ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದು ಕಳೆದೆರಡು ತಿಂಗಳುಗಳ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಕಂಡುಬಂದಿದೆ. ಇದರ ಪರಿಣಾಮ ದೇಶದ ಒಟ್ಟಾರೆ ಆರ್ಥಿಕತೆಯೂ ನಿರೀಕ್ಷೆಗೂ ಮೀರಿದ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಇವೆಲ್ಲದರ ನಡುವೆ ಆರ್‌ಬಿಐ ಈ ಎರಡು ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಆರ್ಥಿಕತೆಯಲ್ಲಿ ಎಲ್ಲರ ಒಳಗೊಳ್ಳುವಿಕೆಗೆ ಹಾದಿ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next