Advertisement

ಹಬ್ಬದ ಕೊಡುಗೆ ಪ್ರಕಟಿಸಿದ ಎಸ್‌ಬಿಐ

11:17 PM Sep 16, 2021 | Team Udayavani |

ಹೊಸದಿಲ್ಲಿ: ದೇಶದ ಸಾರ್ವಜನಿಕ ರಂಗದ ಅತೀ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಗುರುವಾರ ಗ್ರಾಹಕರಿಗೆ ಹಬ್ಬದ ಋತುವಿನ ಹಲವು ಕೊಡುಗೆಗಳನ್ನು ಪ್ರಕಟಿಸಿದೆ.

Advertisement

ಮೊತ್ತದ ಮಿತಿಯಿಲ್ಲದೆ ಗೃಹಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 6.70ಕ್ಕೆ ಇಳಿಸ ಲಾಗಿದೆ. ಈ ಹಿಂದೆ 75 ಲಕ್ಷ ರೂ.ಗಳಿಗಿಂತ ಹೆಚ್ಚಿನ ಗೃಹ ಸಾಲ ಪಡೆಯುವವರು ಶೇ. 7.15 ಬಡ್ಡಿದರ ಪಾವತಿಸಬೇಕಾಗಿತ್ತು. ವೇತನದಾರರಲ್ಲದವರಿಗೆ ನೀಡಲಾಗುವ ಸಾಲಕ್ಕೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಬಡ್ಡಿದರವನ್ನೂ ತೆಗೆದು ಹಾಕ ಲಾಗಿದೆ. ಇದರಿಂದ ವೇತನ ದಾರರಲ್ಲದವರಿಗೆ ಗೃಹಸಾಲ ಗಳ ಮೇಲಿನ ಬಡ್ಡಿಯಲ್ಲಿ 15 ಮೂಲಾಂಶಗಳಷ್ಟು ಉಳಿ ತಾಯವಾಗಲಿದೆ. ಗೃಹ ಸಾಲಗಳ ಸಂಸ್ಕರಣ ಶುಲ್ಕವನ್ನು ತೆಗೆದುಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next