Advertisement

ಶುಕ್ರವಾರದಿಂದ ನೂತನ 200 ರೂ. ನೋಟು ಚಲಾವಣೆಗೆ: ಆರ್ ಬಿಐ

02:29 PM Aug 24, 2017 | Sharanya Alva |

ನವದೆಹಲಿ:200 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ರಿಲೀಸ್ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ನೂತನ 500 ರೂಪಾಯಿ ಮುಖಬೆಲೆಯ ನೋಟಿನ ಎತ್ತರದಷ್ಟೇ 200 ರೂ. ನೋಟು ಇರಲಿದ್ದು, ಅಗಲ ಸ್ವಲ್ಪ ಕಡಿಮೆ. ಹೊಸ ನೋಟು ಕಡು ಹಳದಿ ಬಣ್ಣದಲ್ಲಿದ್ದು, ಮುಂಭಾಗದ ಮಧ್ಯದಲ್ಲಿ ಗಾಂಧಿ ಭಾವಚಿತ್ರವಿದೆ. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದೆ ಎಂದು ಆರ್ ಬಿಐ ಹೇಳಿದೆ.

ಆಗಸ್ಟ್ 25ರಂದು ಆರ್ ಬಿಐ 200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ನೀಡಲು ಸಜ್ಜಾಗಿದೆ. ನೋಟಿನಲ್ಲಿ ಮಹಾತ್ಮಗಾಂಧಿ ಚಿತ್ರವಿದ್ದು, ಡಾ.ಊರ್ಜಿತ್ ಆರ್ ಪಟೇಲ್ ಅವರ ಸಹಿಯುಳ್ಳ ನೋಟ ಅನ್ನು ಆಯ್ದ ಆರ್ ಬಿಐ ಕಚೇರಿಗಳಲ್ಲಿ ಮತ್ತು ಕೆಲವು ಬ್ಯಾಂಕ್ ಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next