Advertisement

ಪರಿಮಿತಿ ಉಲ್ಲಂಘನೆ ಆರೋಪ : IDBI ಬ್ಯಾಂಕ್ ಗೆ ಕ್ಲೀನ್ ಚಿಟ್ ಕೊಟ್ಟ RBI ..!

02:15 PM Mar 11, 2021 | Team Udayavani |

ನವ ದೆಹಲಿ : ಐ ಡಿ ಬಿ ಐ ಬ್ಯಾಂಕ್ ಲಿಮಿಟೆಡ್ ಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ರಿಸರ್ವ್ ಬ್ಯಾಂಕ್  ಹೇಳಿದೆ.

Advertisement

“ಪ್ರಸ್ತುತ ಆರ್‌ ಬಿ ಐ ನ ಪ್ರಾಂಪ್ಟ್ ಕರೆಕ್ಟಿವ್ ಆ್ಯಕ್ಷನ್ ಫ್ರೇಮ್‌ ವರ್ಕ್ (ಪಿಸಿಎಎಫ್) ಅಡಿಯಲ್ಲಿರುವ ಐ ಡಿ ಬಿ ಐ ಬ್ಯಾಂಕ್ ಲಿಮಿಟೆಡ್‌ ನ ಕಾರ್ಯಕ್ಷಮತೆಯನ್ನು 2021 ರ ಫೆಬ್ರವರಿ 18 ರಂದು ನಡೆದ ಸಭೆಯಲ್ಲಿ ಮಂಡಳಿಯ ಹಣಕಾಸು ಮೇಲ್ವಿಚಾರಣೆ (ಬಿ ಎಫ್‌ ಎಸ್) ಪರಿಶೀಲಿಸಿದೆ. ಪ್ರಕಟಿತ ಫಲಿತಾಂಶಗಳ ಪ್ರಕಾರ ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ನಿಯಂತ್ರಕ ಬಂಡವಾಳ, ನಿವ್ವಳ ಎನ್‌ ಪಿ ಎ ಮತ್ತು ಹತೋಟಿ ಅನುಪಾತದ ಪಿಸಿಎ ನಿಯತಾಂಕಗಳನ್ನು ಉಲ್ಲಂಘಿಸಿಲ್ಲ ” ಎಂದು ಆರ್‌ ಬಿ ಐ ತಿಳಿಸಿದೆ.

ಓದಿ : ರುದ್ರಾಕ್ಷಿ ರೂಪದ ಕೋಟಿ ಶಿವಲಿಂಗ; ಇದು ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ಸನ್ನಿಧಿ

ಕನಿಷ್ಠ ನಿಯಂತ್ರಕ ಬಂಡವಾಳ, ನಿವ್ವಳ ಎನ್‌ ಪಿ ಎ ಮತ್ತು ಹತೋಟಿ ಅನುಪಾತದ ಮಾನದಂಡಗಳನ್ನು ಅದು ನಿರಂತರವಾಗಿ ಅನುಸರಿಸಲಿದೆ ಎಂದು ಬ್ಯಾಂಕ್ ಲಿಖಿತ ಬದ್ಧತೆಯನ್ನು ಒದಗಿಸಿದೆ ಮತ್ತು ಇದು ಜಾರಿಗೆ ತಂದಿರುವ ರಚನಾತ್ಮಕ ಮತ್ತು ವ್ಯವಸ್ಥಿತ ಸುಧಾರಣೆಗಳ ಕುರಿತು ಆರ್‌ ಬಿ ಐ ಗೆ ತಿಳಿಸಿದೆ.

“ಮೇಲಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಐಡಿಬಿಐ ಬ್ಯಾಂಕ್ ಲಿಮಿಟೆಡ್ ನನ್ನು ಕೆಲವು ಷರತ್ತುಗಳು ಮತ್ತು ನಿರಂತರ ಮೇಲ್ವಿಚಾರಣೆಗೆ ಒಳಪಟ್ಟು ಪಿಸಿಎ ಚೌಕಟ್ಟಿನಿಂದ ಹೊರತೆಗೆಯಲು ನಿರ್ಧರಿಸಲಾಗಿದೆ” ಎಂದು ಆರ್ ಬಿ ಐ ಹೇಳಿದೆ.

Advertisement

ಓದಿ : ಪಶ್ಚಿಮಬಂಗಾಳ ಚುನಾವಣಾ ಪ್ರಚಾರ: ನಟ ಮಿಥುನ್ ಚಕ್ರವರ್ತಿಗೆ “ವೈ ಪ್ಲಸ್” ಕಮಾಂಡೋ ಭದ್ರತೆ

Advertisement

Udayavani is now on Telegram. Click here to join our channel and stay updated with the latest news.

Next