Advertisement
ಸುಮಾರು 5 ತಿಂಗಳ ಹಿಂದೆಯೇ ಆರ್ ಬಿಐ 2000 ಸಾವಿರ ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿತ್ತು. ಅಲ್ಲದೇ ಮೈಸೂರಿನಲ್ಲಿರುವ ಆರ್ ಬಿಐ ಪ್ರಿಂಟಿಂಗ್ ಪ್ರೆಸ್ ನಲ್ಲಿ 200 ರೂ. ಮುಖಬೆಲೆಯ ನೋಟುಗಳ ಮುದ್ರಣ ಆರಂಭವಾಗಿರುವುದಾಗಿ ವರದಿ ತಿಳಿಸಿದೆ.
ಹೊಸದಾಗಿ ಚಲಾವಣೆಗೆ ತಂದಿರುವ 2000 ರೂಪಾಯಿ ನೋಟುಗಳನ್ನು ಸರ್ಕಾರ ರದ್ದುಗೊಳಿಸಿ, 1000 ರೂ. ನಾಣ್ಯವನ್ನು ಜಾರಿಗೆ ತರಲು ನಿರ್ಧರಿಸಿರುವುದು ನಿಜವೇ ಎಂದು ವಿರೋಧ ಪಕ್ಷ ಬುಧವಾರ ರಾಜ್ಯಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಪ್ರಶ್ನಿಸಿದೆ.
Related Articles
Advertisement
ಶೂನ್ಯ ವೇಳೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಅವರು 2000 ರೂ. ನೋಟು ರದ್ದಾಗುವ ಊಹಾಪೋಹದ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಕೇಂದ್ರ ಸರ್ಕಾರ 2000 ರೂ. ನೋಟು ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿದೆಯಾ. 2000 ರೂ. ನೋಟುಗಳ ಮುದ್ರಣ ಮಾಡಬಾರದು ಎಂದು ಆರ್ ಬಿಐ ಆದೇಶ ನೀಡಿದೆಯಂತೆ. ಈ ಬಗ್ಗೆ ಸಂಸತ್ ಕಲಾಪದಲ್ಲಿ ಯಾವುದಾದರೂ ನಿರ್ಧಾರವನ್ನು ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದ್ದರು.
ಈಗಾಗಲೇ ಒಂದು ಬಾರಿ ನೋಟು ನಿಷೇಧಿಸಿಯಾಗಿದೆ, ಈಗ 2ನೇ ನಿಷೇಧದ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಈ ಬಗ್ಗೆ ವಿತ್ತ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಅಗರ್ ವಾಲ್ ಹೇಳಿದರು. ಇದು ಆರ್ ಬಿಐನ ಕ್ರಮವಾಗಿದೆ ಎಂದು ಉಪಸಭಾಪತಿ ಪಿಜೆ ಕುರಿಯನ್ ತಿಳಿಸಿದರು.
ಈ ಹಿಂದೆ ನೋಟು ನಿಷೇಧದ ನಿರ್ಧಾರವನ್ನು ಕೈಗೊಂಡಿದ್ದು ಕೇಂದ್ರ ಸರ್ಕಾರವೇ ಹೊರತು, ಆರ್ ಬಿಐ ಅಲ್ಲ ಎಂದು ತಿರುಗೇಟು ನೀಡಿದರು. ನೋಟು ನಿಷೇಧದ ಬಗ್ಗೆ ಆರ್ ಬಿಐ ಮಂಡಳಿ ವಿರೋಧಿಸಿತ್ತು, ಆದರೆ ಕೇಂದ್ರ ಸರ್ಕಾರ ನಿಷೇಧದ ನಿರ್ಧಾರ ತೆಗೆದುಕೊಂಡಿತ್ತು. ಇದೀಗ 2ನೇ ಬಾರಿಯೂ ಸರ್ಕಾರವೇ ಮಾಡಬೇಕಾಗಿದೆ ಎಂದರು.