Advertisement

ರೆಪೋ ದರ ಮತ್ತೆ 50 ಬಿಪಿಎಸ್‌ ಹೆಚ್ಚಳ?

11:53 PM Sep 25, 2022 | Team Udayavani |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸತತ ನಾಲ್ಕನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂಬುದಾಗಿ ಆರ್ಥಿಕ ತಜ್ಞರು ಹೇಳಿದ್ದಾರೆ.

Advertisement

ಆರ್‌ಬಿಐಯ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆ ಬುಧವಾರ ಆರಂಭವಾಗಲಿದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಸಭೆಯ ನಿರ್ಣಯಗಳನ್ನು ಶುಕ್ರವಾರ ಪ್ರಕಟಿಸುವರು. ಮೇ ತಿಂಗಳಿನಿಂದ ಈಚೆಗೆ ಆರ್‌ಬಿಐ ರೆಪೋ ದರಗಳನ್ನು 140 ಮೂಲಾಂಶ (ಬಿಪಿಎಸ್‌)ಗಳಷ್ಟು ಹೆಚ್ಚಿಸಿದೆ, ಈ ಬಾರಿ ಮತ್ತೆ 50 ಮೂಲಾಂಶಗಳಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರೆಪೋ ದರವನ್ನು ಮೇ ತಿಂಗಳಿನಲ್ಲಿ 40 ಬಿಪಿಎಸ್‌ ಹೆಚ್ಚಿಸ ಲಾಗಿದ್ದರೆ, ಜೂನ್‌ ಮತ್ತು ಆಗಸ್ಟ್‌ನಲ್ಲಿ ತಲಾ 50 ಬಿಪಿಎಸ್‌ ಏರಿಸಲಾಗಿತ್ತು. ಪ್ರಸ್ತುತ ರೆಪೋ ದರ ಶೇ. 5.4ರಲ್ಲಿದೆ. ಏರುಗತಿಯಲ್ಲಿರುವ ಹಣ ದುಬ್ಬರ ವನ್ನು ಮಣಿಸಲು ಆರ್‌ಬಿಐ ಈ ಕ್ರಮ ತೆಗೆದುಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next