Advertisement

ಆರ್‌ಬಿಐ ನಿವೃತ್ತ ನೌಕರರ ಪ್ರತಿಭಟನೆ

12:33 PM Mar 07, 2018 | Team Udayavani |

ಬೆಂಗಳೂರು: ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು. ರಿಸರ್ವ್‌ ಬ್ಯಾಂಕ್‌ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಮಂಗಳವಾರ ಆರ್‌ಬಿಐ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದ ನಿವೃತ್ತ ನೌಕರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. 

Advertisement

ಕಳೆದ 16 ವರ್ಷಗಳಿಂದ ಪಿಂಚಣಿ ಪರಿಷ್ಕರಣೆ ಆಗಿಲ್ಲ. ಕೇಂದ್ರ ಹಣಕಾಸು ಸಚಿವಾಲಯದ ಹಸ್ತಕ್ಷೇಪ ಮತ್ತು ಸೂಚನೆಯ ಮೇರೆಗೆ ಪಿಂಚಣಿ ಪರಿಷ್ಕಣೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಆರ್‌ಬಿಐ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ನಿವೃತ್ತ ನೌಕರರ ಪಿಂಚಣಿ ವೆಚ್ಚವನ್ನು ತನ್ನ ಪಿಂಚಣಿ ನಿಧಿಯಿಂದ ಭರಿಸುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಬೀಳುವುದಿಲ್ಲ. ಹೀಗಾಗಿ ಪಿಂಚಣಿ ಪರಿಷ್ಕರಣೆ ಮಾಡದಿರುವುದು ಕಾನೂನುಬಾಹಿರ ಎಂದು ನಿವೃತ್ತ ನೌಕರರು ಆರೋಪಿಸಿದರು. 

ಪಿಂಚಣಿ ಪರಿಷ್ಕರಣೆ ಮಾಡದೇ ಇರುವುದರಿಂದ ಹಿರಿಯ ನಿವೃತ್ತ ನೌಕರರ ಮತ್ತು ಇತ್ತೀಚಿಗೆ ನಿವೃತ್ತಿ ಹೊಂದುತ್ತಿರುವ ನೌಕರರ ಪಿಂಚಣಿಯಲ್ಲಿ ತಾರತಮ್ಯ ಆಗುತ್ತಿದ್ದು, ನಿವೃತ್ತ ನೌಕರರಿಗೆ ಆರ್ಥಿಕ ಅಸಮಾನತೆಯ ಜೊತೆಗೆ ಪಿಂಚಣಿದಾರರ ಗೌರವ ಮತ್ತು ಘನತೆಗೆ ಧಕ್ಕೆ ಆಗುತ್ತಿದೆ. ಪಿಂಚಣಿ ಪರಿಷ್ಕರಣೆಗೆ ಆರ್‌ಬಿಐ ಗವರ್ನರ್‌, ಕೇಂದ್ರ ಹಣಕಾಸು ಸಚಿವ, ಪ್ರಧಾನ ಮಂತ್ರಿ, ರಾಷ್ಟ್ರಪತಿಯವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದರೂ, ಪರಿಹಾರ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಧರಣಿ ನಡೆಸಬೇಕಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next