ನವದೆಹಲಿ: ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ ದೇಶದ 5 ಸಹಕಾರಿ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜ್ಯದ ಮಂಡ್ಯ ಜಿಲ್ಲೆಯ ಸಹಕಾರ ಬ್ಯಾಂಕ್ ಸೇರಿದಂತೆ ದೇಶದ 5 ಸಹಕಾರ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ಕ್ರಮ ಕೈಗೊಂಡಿದ್ದು, ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿರುವ ಕಾರಣ ಇವುಗಳ ಮೇಲೆ ನಿರ್ಭಂಧ ವಿಧಿಸಲಾಗಿದೆ ಎಂದು ಹೇಳಿದೆ.
ಶುಕ್ರವಾರ ನೀಡಿದ ಪ್ರಕಟಣೆಯಲ್ಲಿ ಕೇಂದ್ರೀಯ ಬ್ಯಾಂಕ್‌ನ ಪೂರ್ವಾನುಮತಿ ಇಲ್ಲದೇ , ಹೊಸ ಠೇವಣಿಗಳನ್ನು ಸ್ವೀಕರಿಸಲು ಅಥವಾ ಯಾವುದೇ ರೀತಿಯ ಸಾಲಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. 5 ಬ್ಯಾಂಕ್‌ಗಳ ಪೈಕಿ ಆರ್‌ಬಿಐ 3 ಬ್ಯಾಂಕ್‌ಗಳ ಮೇಲೆ ಭಾಗಶಃ ಠೇವಣಿ ಹಿಂಪಡೆಯುವ ನಿರ್ಬಂಧವನ್ನು ವಿಧಿಸಿದ್ದು 2 ರ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಿದೆ.
ಬ್ಯಾಂಕ್ ವ್ಯವಹಾರ ಸ್ಥಿರ
ಈ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗುವವರೆಗೆ ನಿರ್ಭಂಧಗಳೊಂದಿಗೆ ಬ್ಯಾಂಕಿಂಗ್ ಕಾರ್ಯ ಮುಂದುವರೆಸಬಹುದು ಎಂದು ಆರ್‌ಬಿಐ ಹೇಳಿದೆ. ಅಲ್ಲದೇ ಸಾಲ ಸೌಲಭ್ಯಗಳು, ಬಂಡವಾಳಗಳ ಮೇಲಿನ ತೀರ್ಮಾನ ತೆಗೆದುಕೊಳ್ಳುವಾಗ ಆರ್‌ಬಿಐ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದಿದೆ. ಈ ಹಿಂದೆ ಆರ್ಥಿಕವಾಗಿ ಕಳಪೆಯಾಗಿದ್ದ ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದ ಆರ್‌ಬಿಐ ಅವುಗಳ ಪರವಾನಿಗೆಯನ್ನೂ ರದ್ದುಗೊಳಿಸಿತ್ತು.
ಆರ್‌ಬಿಐನಿಂದ ನಿರ್ಬಂಧಕ್ಕೊಳಗಾದ ಬ್ಯಾಂಕ್‌ಗಳ ಪಟ್ಟಿಯಲ್ಲಿ, ಏಚ್‌ಸಿಬಿಎಲ್ ಸಹಕಾರಿ ಬ್ಯಾಂಕ್, ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್, ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್ ಮರ್ಯಾದಿತ್, ಮಂಡ್ಯದ ಶಿಂಶಾ ಸಹಕಾರ ಬ್ಯಾಂಕ್ ನಿಯಮಿತ ಮತ್ತು ಶಂಕರ್‌ರಾವ್ ಮೋಹಿತೆ ಪಾಟಿಲ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ಸೇರಿದೆ.
ಈ ನಿರ್ಬಂಧ 6 ತಿಂಗಳ ಕಾಲ ವಿಧಿಸಲಾಗಿದೆ ಎಂದು ಆರ್‌ಬಿಐ ಹೇಳಿಕೊಂಡಿದೆ. ಇದೇ ರೀತಿ ಆರ್‌ಬಿಐನಿಂದ ಆಗಾಗ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಬ್ಯಾಂಕ್‌ಗಳಲ್ಲಿ ತೀವ್ರ ನ್ಯೂನತೆ ಕಂಡುಬಂದರೆ ಅವುಗಳ ಮೇಲೆ ಆರ್‌ಬಿಐ ಭಾರೀ ದಂಡವನ್ನೂ ವಿಧಿಸುತ್ತದೆ.