ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ರಿಪೋ ದರವನ್ನು ನಿರಂತರ ಮೂರನೇ ಬಾರಿಗೆ ಶೇ.0.25 ಪ್ರಮಾಣದಲ್ಲಿ ಕಡಿತ ಮಾಡಿದ ಬೆನ್ನಲ್ಲೇ, ಆನ್ ಲೈನ್ ಮೂಲಕ ಆರ್ ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಮ್) ಮತ್ತು ನೆಫ್ಟ್ (ನ್ಯಾಶನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸಫರ್) ವಹಿವಾಟಿಗೆ ಶುಲ್ಕವನ್ನು ರದ್ದುಪಡಿಸಲು ನಿರ್ಧರಿಸಿದೆ.
ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಆರ್ ಟಿಜಿಎಸ್ ಮೂಲಕ ಹಾಗೂ NEFT ಮುಖಾಂತರ ಭಾರೀ ಮೊತ್ತದ ಹಣದ ವರ್ಗಾವಣೆ ಮಾಡುವ ಗ್ರಾಹಕರಿಗೆ ಬ್ಯಾಂಕ್ ಗಳು ಶುಲ್ಕ, ತೆರಿಗೆಯನ್ನು ವಿಧಿಸುತ್ತಿದ್ದವು.
ಇದೀಗ ಡಿಜಿಟಲ್ ವ್ಯವಹಾರದಲ್ಲಿ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣದ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸದಂತೆ ನಿರ್ಧರಿಸಿರುವುದಾಗಿ ಆರ್ ಬಿಐ ಹೇಳಿದೆ. ಈ ಬಗ್ಗೆ ಬ್ಯಾಂಕ್ ಗಳು ಗ್ರಾಹಕರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಒಂದು ವಾರದೊಳಗೆ ಸೂಚನೆ ನೀಡುವುದಾಗಿ ಆರ್ ಬಿಐ ತಿಳಿಸಿದೆ. ಅಷ್ಟೇ ಅಲ್ಲ ಎಟಿಎಂ ಇಂಟರ್ ಚೇಂಜ್ ಶುಲ್ಕದ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸುವುದಾಗಿ ಆರ್ ಬಿಐ ತಿಳಿಸಿದೆ.