Advertisement
ಪ್ರಸ್ತುತ ಇರುವ ಬ್ಯಾಚ್ ಪ್ರೊಸೆಸಿಂಗ್ ಮಾದರಿಯಲ್ಲಿ ಚೆಕ್ ಟ್ರಂಕೇಶನ್ ಸಿಸ್ಟಮ್ ಮೂಲಕ ಚೆಕ್ ನಗದು ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ ಕನಿಷ್ಠ 2 ಕೆಲಸದ ದಿನಗಳು ಬೇಕಾಗುತ್ತದೆ. ಇದರ ಬದಲಿಗೆ, ಚೆಕ್ ಬಂದಂತೆಯೇ ಅದನ್ನು ನಗದಾಗಿ ಪರಿವರ್ತಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಇದರಿಂದ ಚೆಕ್ ಡೆಪಾಸಿಟ್ ಆದ ಕೆಲವೇ ಗಂಟೆಗಳಲ್ಲಿ ವಿಲೇವಾರಿ ಮಾಡಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ದಾಸ್ ತಿಳಿಸಿದ್ದಾರೆ.
ಸತತ 9ನೇ ಬಾರಿಗೆ ಸಾಲ ನೀತಿ ಯಲ್ಲಿ ಬದಲಾವಣೆ ಮಾಡದಿರಲು ಆರ್‌ಬಿಐ ತೀರ್ಮಾನಿಸಿದೆ. ಹೀಗಾಗಿ ಗೃಹ, ವಾಹನ ಸೇರಿದಂತೆ ಯಾವುದೇ ಸಾಲಗಳ ಇಎಂಐ ಮತ್ತು ಅವುಗಳ ಬಡ್ಡಿ ದರದಲ್ಲಿ ಬದ ಲಾವಣೆ ಆಗುವುದಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿನ ಹಣದುಬ್ಬರ ಏರಿಕೆ ಪ್ರಮಾಣದಲ್ಲಿಯೇ ಇರುವು ದರಿಂದ ಬಡ್ಡಿದರ ಏರಿಕೆ ಮಾಡ ದಿರಲು ಸಮಿತಿ ತೀರ್ಮಾನಿಸಿದೆ ಎಂದು ಆರ್‌ಬಿಐ ಹೇಳಿದೆ.