Advertisement

ಬಡ್ಡಿದರ ಇನ್ನಷ್ಟು ಕಡಿತ ನಿರೀಕ್ಷೆ! ಆರ್ಥಿಕಾಭಿವೃದ್ಧಿಗೆ ಆರ್‌ಬಿಐ ಪೂರಕ ಕ್ರಮ

09:59 AM Dec 02, 2019 | |

ಹೊಸದಿಲ್ಲಿ: ದೇಶದ ಆರ್ಥಿಕಾಭಿವೃದ್ಧಿಯನ್ನು ಉತ್ತೇಜಿಸಲು ಸತತ ಆರನೇ ಬಾರಿಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಬಡ್ಡಿದರಗಳನ್ನು ಇನ್ನಷ್ಟು ಕಡಿತ ಮಾಡುವ ನಿರೀಕ್ಷೆ ಇದೆ.

Advertisement

ದೇಶದ ಜಿಡಿಪಿ ನವೆಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಶೇ.4.5ರಷ್ಟಕ್ಕೆ ಇಳಿಕೆ ಕಂಡಿದ್ದು ಇದರೊಂದಿಗೆ ಉತ್ಪಾದನ ವಲಯ ಕುಂಟುತ್ತಿದೆ. ಇದಕ್ಕಾಗಿ ಬಡ್ಡಿದರಗಳನ್ನು ಕಡಿತಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.

2019ರಲ್ಲಿ ಈವರೆಗೆ ಒಟ್ಟು ಐದು ಬಾರಿ ಆರ್‌ಬಿಐ ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಒಟ್ಟು 135 ಮೂಲಾಂಶಗಳಷ್ಟು ಬಡ್ಡಿದರ ಇದರಿಂದ ಕಡಿಮೆಯಾಗಿದ್ದು, ಆರ್ಥಿಕ ಉತ್ತೇಜನದ ನಿರೀಕ್ಷೆ ಇತ್ತು. ಆರ್ಥಿಕಾಭಿವೃದ್ಧಿ ಒಂದು ಹಂತಕ್ಕೆ ಬರುವಲ್ಲಿವರೆಗೆ ಬಡ್ಡಿದರಗಳನ್ನು ಕಡಿತಗೊಳಿಸಲಾಗುವುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಹಿಂದೊಮ್ಮೆ ಹೇಳಿದ್ದರು. ಡಿ.3ರಿಂದ ಹಣಕಾಸು ನೀತಿ ವಿಮರ್ಶೆ ಆರಂಭವಾಗಲಿದ್ದು ಬಡ್ಡಿದರ ಇಳಿಸುವ ಘೋಷಣೆಯಾಗಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next