Advertisement

ನೋ ರಿಲೀಫ್, RBI ಅಚ್ಚರಿ: ರೆಪೋ ಸಹಿತ ಎಲ್ಲ ದರ ಯಥಾಸ್ಥಿತಿ

03:11 PM Feb 08, 2017 | udayavani editorial |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರಂತರ ಎರಡನೇ ಬಾರಿಗೆ ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೇ ಶೇ.6.25ರ ರಿಪೋ ರೇಟ್‌ ಜತೆಗೆ ಉಳಿದೆಲ್ಲ ದರಗಳನ್ನು  ಯಥಾವತ್ತಾಗಿ ಉಳಿಸಿಕೊಂಡಿದೆ.

Advertisement

ಆರ್‌ಬಿಐ ನ ಈ ಕ್ರಮದಿಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 180 ಅಂಕಗಳಷ್ಟು ಕುಸಿದು ಮಧ್ಯಾಹ್ನ  3 ಗಂಟೆಯ ಸುಮಾರಿಗೆ 65.36 ಅಂಕಗಳ ನಷ್ಟದಲ್ಲಿ 28273.28  ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಹಣಕಾಸು ವಲಯದಲ್ಲಿ  ಆರ್‌ ಬಿ ಐ ಶೇ.0.25ರ ಪ್ರಮಾಣದಲ್ಲಿ ಬಡ್ಡಿದರ ಕಡಿತ ಮಾಡುವುದೆಂಬ ವಿಶ್ವಾಸ ನೆಲೆಸಿತ್ತು.

ಶೇ.6.25ರ ರಿಪೋ ರೇಟ್‌ ಮಾತ್ರವಲ್ಲದೆ, ಇತರ ದರಗಳಾದ ರಿವರ್ಸ್‌ ರಿಪೋ ರೇಟ್‌, ಮಾರ್ಜಿನಲ್‌ ಸ್ಟಾಂಡಿಂಗ್‌ ಫೆಸಿಲಿಟಿ ರೇಟ್‌ ಮತ್ತು ಬ್ಯಾಂಕ್‌ ರೇಟ್‌ – ಇವೆಲ್ಲವನ್ನೂ ಆರ್‌ಬಿಐ ಈ ವರೆಗಿನ ದರದಲ್ಲೇ ಉಳಿಸಿಕೊಂಡಿರುವುದು ಹಣಕಾಸು ಮಾರುಕಟ್ಟೆಯ ಅಚ್ಚರಿಗೆ ಕಾರಣವಾಗಿದೆ.

ಈ ಎಲ್ಲ ದರಗಳನ್ನು ಯಥಾವತ್‌ ಸ್ಥಿತಿಯಲ್ಲೇ ಉಳಿಸಿಕೊಳ್ಳುವುದಕ್ಕೆ ಆರ್‌ ಬಿ ಐನ ಹಣಕಾಸು ನೀತಿ ಪರಾಮರ್ಶೆ ಸಮಿತಿ ಎಂಪಿಸಿ ಯ ಎಲ್ಲ ಆರು ಸದಸ್ಯರು ಸರ್ವಾನುಮತದಿಂದ ತೀರ್ಮಾನಿಸಿದರು. 

ಕಳೆದ ವರ್ಷ ನವೆಂಬರ್‌ 8ರಂದು ಕೇಂದ್ರ ಸರಕಾರ ಅತ್ಯಂತ ಆಘಾತಕಾರಿ ಕ್ರಮದಲ್ಲಿ  500 ರೂ. ಹಾಗೂ 1,000 ರೂ. ನೋಟುಗಳನ್ನು ನಿಷೇಧಿಸಿದ ಬಳಿಕದಲ್ಲಿ ನಿಧಾನಗೊಂಡ ದೇಶದ ಆರ್ಥಿಕಾಭಿವೃದ್ಧಿ ಹಾಗೂ ಬ್ಯಾಂಕುಗಳಿಗೆ ಹರಿದು ಬಂದ ಅಪಾರ ಪ್ರಮಾಣದ ಕಡಿಮೆ ವೆಚ್ಚದ ಠೇವಣಿಗಳಿಂದಾಗಿ ಆರ್‌ಬಿಐ ಈ ಬಾರಿ ತನ್ನ ಬಡ್ಡಿ ದರಗಳನ್ನು, ಆರ್ಥಿಕ ಅಭಿವೃದ್ಧಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ, ಕಡಿತಗೊಳಿಸುವುದೆಂದು ವ್ಯಾಪಕವಾಗಿ ಭಾವಿಸಲಾಗಿತ್ತು.

Advertisement

ಕಳೆದ ವರ್ಷ ನವೆಂಬರ್‌ – ತಿಂಗಳಲ್ಲಿ ಗ್ರಾಹಕ ಹಣದುಬ್ಬರ ಪ್ರಮಾಣ ಕೂಡ ನಿಯಂತ್ರಣದಲ್ಲಿದ್ದುದು ಇದಕ್ಕೆ ಪೂರಕವಾಗಿತ್ತು. ಆದರೆ ಇಂದಿನ ಆರ್‌ಬಿಐ ನಡೆ ಅಚ್ಚರಿದಾಯಕವೆನಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next