Advertisement
ಮೇ ತಿಂಗಳಲ್ಲಿ ನೋಟುಗಳ ಪರಿಶೀಲನೆಗೆ ಗುತ್ತಿಗೆ ನೀಡಲು ಜಾಗತಿಕ ಮಟ್ಟದಲ್ಲಿಯೇ ಅರ್ಜಿ ಆಹ್ವಾನಿಸಲು ನಿರ್ಧರಿಸಿತ್ತು. ಬಳಿಕ ಈ ಪ್ರಕ್ರಿಯೆ ಕಾರಣಾಂತರದಿಂದ ರದ್ದುಗೊಳಿಸಲಾಯಿತು. ಇದೀಗ ಮತ್ತೆ ಗುತ್ತಿ ಗೆಗೆ ಆಹ್ವಾನಿಸಿದೆ. ಈಗಾಗಲೇ ಬ್ಯಾಂಕ್‌ಗಳಿಗೆ ಜಮೆ ಆಗಿರುವ ಅಮಾನ್ಯಗೊಂಡಿರುವ 500, 1000 ರೂ. ಮುಖಬೆಲೆಯ ನೋಟುಗಳನ್ನೆಲ್ಲ ಪರಿಶೀಲನೆಗೆ ಒಳಪಡಿಸುವುದು ಇದರ ಉದ್ದೇಶ. ಇದಕ್ಕಾಗಿ ಆರು ತಿಂಗಳ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಒಂದೊಮ್ಮೆ ಈ ಅವಧಿ ಯಲ್ಲಿ ಪೂರ್ಣಗೊಳ್ಳದೇ ಇದ್ದರೆ ಇನ್ನೆರಡು ತಿಂಗಳು ವಿಸ್ತರಿಸಲಾಗುತ್ತದೆ ಎಂದು ಜು.12 ರಂದೇ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ತಿಳಿಸಿದ್ದಾರೆ.
ತೆರಿಗೆ ಇಲಾಖೆ ಇಲಾಖೆ ಕಳೆದ 3 ವರ್ಷಗಳಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 71,941 ಕೋಟಿ ರೂ.ಗಳಷ್ಟು ಲೆಕ್ಕವಿಲ್ಲದ ಆದಾಯ ಪತ್ತೆ ಮಾಡಿದ್ದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಅಪನಗದೀಕರಣ ಬಳಿಕ, ಹೆಚ್ಚಾ ಕಡಿಮೆ 5,400 ಕೋಟಿ ರೂ. ಲೆಕ್ಕವಿಲ್ಲದ ಆದಾಯ ಹಾಗೂ 3,03,367 ಕೆ.ಜಿ. ಚಿನ್ನ ಇರುವುದು ಪತ್ತೆಯಾಗಿರುವುದಾಗಿ ಹೇಳಿದೆ. 200 ರೂ. ಮುಖಬೆಲೆ ನೋಟು ಸಹಕಾರಿ
ಶೀಘ್ರವೇ 200 ರೂ. ಮುಖಬೆಲೆ ನೋಟು ಗಳನ್ನು ಪರಿಚಯಿಸಲಿರುವ ಸರ್ಕಾರ, ಇದರಿಂದ 500, 2000 ರೂ ಮುಖಬೆಲೆಯ ಹೊಸ ನೋಟುಗಳು ಹಾಗೂ 200ಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳ ವಹಿವಾಟಿನ ಮೇಲಿನ ಒತ್ತಡ ಕಡಿಮೆ ಮಾಡಲಿದೆ. ಅಲ್ಲದೆ, ಕಡಿಮೆ ಮುಖಬೆಲೆಯ ನೋಟುಗಳ ಕೊರತೆಯನ್ನೂ ನೀಗಿಸಲಿದೆ ಎಂದು ಎಸ್‌ಬಿಐ ವರದಿ ಹೇಳಿದೆ.