ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ ಹೊಸ 500 ರೂಪಾಯಿ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಲಿದೆ ಎಂದು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
500 ರೂ. ಮುಖಬೆಲೆಯ ನೋಟಿನ ಮುಂಭಾಗದಲ್ಲಿ ಎ ಸಂಖ್ಯೆಯ ಸರಣಿಯ ಹೊಂದಿರಲಿದೆ. ಹೊಸ ನೋಟು ಕೂಡಾ ಹಳೆಯ ನೋಟಿನಂತೆ ಹೋಲಿಕೆ ಇರಲಿದೆ ಎಂದು ಪ್ರಕಟಣೆ ವಿವರಿಸಿದೆ.
2016ರ ನವೆಂಬರ್ 8ರಂದು ಆರ್ ಬಿಐ 500 ಮತ್ತು 1000 ಮುಖಬೆಲೆಯ ಹಳೆ ನೋಟನ್ನು ರದ್ದು ಮಾಡಿ, 2000 ರೂ. ಹಾಗೂ 500 ರೂ. ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಿತ್ತು. ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿತ್ತು.
ಏತನ್ಮಧ್ಯೆ ಪ್ರಸ್ತುತ ಚಲಾವಣೆಯಲ್ಲಿರುವ 500 ಹೊಸ ನೋಟಿನ ಕಥೆ ಏನು ಎಂಬ ಬಗ್ಗೆ ಗೊಂದಲ ಬೇಡ, ಯಾಕೆಂದರೆ ಹೊಸ 500 ರೂ. ನೋಟು ಯಥಾಪ್ರಕಾರವಾಗಿ ಚಲಾವಣೆಯಲ್ಲಿ ಇರಲಿದೆ ಎಂದು ಸ್ಪಷ್ಟನೆ ನೀಡಿದೆ.
(ಇದನ್ನೂ ಓದಿ:ಸೌಲಭ್ಯ ವಂಚಿತ ಗ್ರಾಮಕ್ಕೆ ‘ಪಾಕ್ ಆಕ್ರಮಿತ ಕಾಶ್ಮೀರ’ ಅಂತ ಹೆಸರಿಟ್ರು)