ಮುಂಬಯಿ: ಬ್ಯಾಂಕಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ. ಆಪರೇಟಿವ್ ಬ್ಯಾಂಕ್ (ಪಿಎಂಸಿ ಬ್ಯಾಂಕ್) ಗ್ರಾಹಕರಿಗೆ ಹಣವಿತ್ ಡ್ರಾಕ್ಕೆ ವಿಧಿಸಲಾಗಿದ್ದ ಮಿತಿಯನ್ನು ಆರ್‌ಬಿಐ ತುಸು ಸಡಿಲಗೊಳಿಸಿದೆ.
ಹಿಂದೆ ಹೇಳಿದಂತೆ 6 ತಿಂಗಳಿಗೆ 1 ಸಾವಿರ ರೂ. ಮಿತಿ ಬದಲಾಗಿ ಇದೀಗ 10 ಸಾವಿರ ರೂ.ವರೆಗೆ ಗ್ರಾಹಕರು ಹಣ ವಿತ್‌ಡ್ರಾ ಮಾಡಲು ಅದು ಅವಕಾಶ ನೀಡಿದೆ.
ಪಿಎಂಸಿ ಬ್ಯಾಂಕ್ ಗ್ರಾಹಕರು ಆರ್‌ಬಿಐ ಕ್ರಮದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದು, ಕೆಲವರು ಕೋರ್ಟ್ ಮೆಟ್ಟಿಲೇರುವ ತೀರ್ಮಾನವನ್ನೂ ಮಾಡಿದ್ದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಬಿಐ ತುಸು ಸಡಿಲಗೊಳಿಸಿದೆ ಎನ್ನಲಾಗಿದೆ.
ಅಲ್ಲದೇ ಶೇ.60ರಷ್ಟು ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸಂಪೂರ್ಣ ವಿತ್‌ಡ್ರಾ ಮಾಡಲೂ ಅವಕಾಶವಿದೆ ಎಂದು ಅದು ಹೇಳಿದೆ.
ಆರ್‌ಬಿಐ ನಿರ್ಬಂಧ ಹಿನ್ನೆಲೆಯಲ್ಲಿ 137 ಶಾಖೆಗಳಲ್ಲಿ ಏಕಾಏಕಿ ಜನ ನೆರೆದಿದ್ದು, ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಅಲ್ಲದೇ ಬ್ಯಾಂಕ್ ನಿಯಮ ಉಲ್ಲಂ ಸಿದ ವಿಚಾರದಲ್ಲಿ ಗ್ರಾಹಕರಿಗೇಕೆ ಸಂಕಷ್ಟ ಎಂದು ಜನ ಪ್ರಶ್ನಿಸಿದ್ದರು.
ಕೆಲವರು ವಿವಾಹಕ್ಕೆ, ಇನ್ನು ಕೆಲವರು ಮನೆ ಖರ್ಚಿನ ಹಣವನ್ನೂ ತಿಂಗಳು ತಿಂಗಳು ಕೂಡಿಡುತ್ತಿದ್ದು, ನಿರ್ಬಂಧದಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಹೇಳಿದ್ದರು.