Advertisement

Paytm ಬ್ಯಾಂಕ್‌ಗೆ 5.49 ಕೋಟಿ ದಂಡ ವಿಧಿಸಿದ ಆರ್‌ಬಿಐ

11:23 PM Mar 01, 2024 | Team Udayavani |

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‌ಎ) ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿ.(ಪಿಪಿಬಿಎಲ್‌)ಗೆ ಆರ್‌ಬಿಐ 5.49 ಕೋಟಿ ರೂ. ದಂಡ ವಿಧಿಸಿದೆ.

Advertisement

ಮಾ.15ರ ನಂತರ ಗ್ರಾಹಕರ ಖಾತೆಗಳಿಗೆ ಯಾವುದೇ ಠೇವಣಿ ಸ್ವೀಕರಿಸದಂತೆ ಈಗಾಗಲೇ ಪಿಪಿಬಿಎಲ್‌ಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಇದೀಗ ದಂಡ ವಿಧಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾನೂನುಬಾಹಿರ ಚಟು ವಟಿಕೆಗಳಲ್ಲಿ ಭಾಗಿಯಾಗಿರುವ ಕುರಿತು ಕಾನೂನು ಜಾರಿ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರ ಪಿಪಿಬಿಎಲ್‌ ಅನ್ನು ಪರಿಶೀಲನೆಗೆ ಒಳ ಪಡಿಸಲಾಯಿತು. ಕೆಲವು ಸಂಸ್ಥೆಗಳು ಪಿಪಿಬಿಎಲ್‌ ಮೂಲಕ ಈ ಹಣವನ್ನು ವರ್ಗಾ ಯಿಸಿವೆ ಎಂದು ಭಾರತದ ಹಣಕಾಸು ಗುಪ್ತಚರ ಘಟಕ(ಎಫ್ಐಯು) ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next