Advertisement

ಬ್ಯಾಂಕ್‌ಗಳು ಶೀಘ್ರ ಬಡ್ಡಿ ದರ ಇಳಿಸಲಿ: ಆರ್‌ಬಿಐ ಗವರ್ನರ್‌

01:45 AM Jul 09, 2019 | Sriram |

ಹೊಸದಿಲ್ಲಿ: ರೆಪೋ ದರವನ್ನು ಇಳಿಕೆ ಮಾಡುತ್ತಿದ್ದಂತೆ ಬ್ಯಾಂಕ್‌ಗಳು ತ್ವರಿತವಾಗಿ ಕ್ರಮ ಕೈಗೊಂಡು ತಮ್ಮ ಗ್ರಾಹಕರ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲದ ಬಡ್ಡಿ ದರವನ್ನೂ ಕಡಿಮೆ ಮಾಡಬೇಕು ಎಂದು ಆರ್‌ಬಿಐ ಸೂಚಿಸಿದೆ. ಈ ವಿತ್ತ ವರ್ಷದಲ್ಲಿ ಮೂರು ಬಾರಿ ಆರ್‌ಬಿಐ ರೆಪೋ ದರ ಇಳಿಕೆ ಮಾಡಿದ್ದು, ಒಟ್ಟಾರೆ ಶೇ. 0.75 ಇಳಿಕೆಯಾಗಿದೆ.

Advertisement

ಬಜೆಟ್ ಅನಂತರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆಗೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ಸಭೆ ನಡೆಸಿದರು. ಜೂನ್‌ 6ರಂದು 50 ಮೂಲಾಂಶ ಬಡ್ಡಿ ರೆಪೋ ದರ ಇಳಿಕೆ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ 21 ಮೂಲಾಂಶವನ್ನು ಮಾತ್ರ ಗ್ರಾಹಕರಿಗೆ ವರ್ಗಾವಣೆ ಮಾಡಲಾಗಿದೆ. ಒಂದು ಸಮಾಧಾನದ ಸಂಗತಿಯೆಂದರೆ, ಈಗ ಈ ಬದಲಾವಣೆ ಕೆಲವೇ ತಿಂಗಳಲ್ಲಿ ನಡೆಯುತ್ತಿದೆ. ಈ ಹಿಂದೆ ಇದು ಆರು ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಿತ್ತು ಎಂದು ಆರ್‌ಬಿಐ ಗವರ್ನರ್‌ ಹೇಳಿದ್ದಾರೆ.

ದೇಶದಲ್ಲಿ ಸೂಕ್ತ ಆರ್ಥಿಕ ದ್ರವ್ಯತೆ ಇದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಮಸ್ಯೆಯನ್ನು ನಾವು ಗಮನಿಸುತ್ತಿದ್ದೇವೆ. ಅಲ್ಲದೆ, ಸಾಗರೋತ್ತರ ಬಾಂಡ್‌ಗಳನ್ನು ಬಿಡುಗಡೆ ಮಾಡುವ ಕುರಿತೂ ಚರ್ಚೆ ನಡೆಸಲಾಗುತ್ತದೆ ಎಂದು ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next