ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಐಸೋಲೇಶನ್ ನಲ್ಲಿ ಇದ್ದುಕೊಂಡು ಕೆಲಸ ನಿರ್ವಹಿಸುವುದಾಗಿ ಶಕ್ತಿಕಾಂತ ದಾಸ್ ಹೇಳಿಕೊಂಡಿದ್ದಾರೆ.
ತನಗೆ ಯಾವುದೇ ರೋಗಲಕ್ಷಣಗಳನ್ನು ಕಂಡುಬಂದಿಲ್ಲ .ಇತ್ತೀಚಿನ ದಿನಗಳಲ್ಲಿ ತನ್ನೊಂದಿಗೆ ಸಂಪರ್ಕಕ್ಕೆ ಬಂದವರು ಸೋಂಕಿನ ಬಗ್ಗೆ ಎಚ್ಚರದಿಂದಿರಿ ಎಂದು ಶಕ್ತಿಕಾಂತ ದಾಸ್ ಟ್ವೀಟ್ ಮಾಡಿದ್ದಾರೆ.
“ನನಗೆ ಕೋವಿಡ್ -19 ಪಾಸಿಟಿವ್ ವರದಿಯಾಗಿದೆ. ಆದರೆ ಯಾವುದೇ ರೋಗ ಲಕ್ಷಣಗಳಿಲ್ಲ. ಆರೋಗ್ಯ ಸ್ಥಿರವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಪರ್ಕಕ್ಕೆ ಬಂದವರು ಎಚ್ಚರವಾಗಿರಿ. ಐಸೋಲೇಶನ್ ನಲ್ಲಿ ಇದ್ದುಕೊಂಡು ಕೆಲಸ ಮುಂದುವರಿಸುತ್ತೇನೆ. ಆರ್‌ಬಿಐನಲ್ಲಿ ಕೆಲಸ ಸಾಮಾನ್ಯದಂತೆ ನಡೆಯುತ್ತಿದೆ. ನಾನು ಎಲ್ಲಾ ಉಪ ಗವರ್ನರ್‌ಗಳು ಮತ್ತು ಇತರ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದೇನೆ ”ಎಂದು ಶಕ್ತಿಕಾಂತ ದಾಸ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ದೇಶದ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ : ಕೇಂದ್ರ ಸಚಿವ ಪ್ರತಾಪ್ ಸಾರಂಗಿ
ದೇಶದ ಎಲ್ಲಾ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ಜನರಿಗೆ ಉಚಿತ ಕೋವಿಡ್ 19 ಲಸಿಕೆ ನೀಡಲು ತಿಳಿಸಿದ್ದಾರೆ. ಲಸಿಕೆ ನೀಡಲು ಪ್ರತಿ ವ್ಯಕ್ತಿಗೆ 500 ರೂಪಾಯಿಯಂತೆ ಖರ್ಚು ಮಾಡಲಾಗುತ್ತದೆ ಎಂದು ಸಾರಂಗಿ ಹೇಳಿದ್ದಾರೆ.