Advertisement

ಆರ್‌ಬಿಐ ಗವರ್ನರ್‌ಗೆ ಮಾಸಿಕ ವೇತನ 2.87 ಲಕ್ಷ ರೂ !

11:26 AM Jan 05, 2020 | Team Udayavani |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರ ಮಾಸಿಕ ವೇತನ ಎಷ್ಟು ಗೊತ್ತಾ? ತುಟ್ಟಿ ಭತ್ಯೆ, ಇತರೆ ಪಾವತಿಗಳು ಸೇರಿ 2.87 ಲಕ್ಷ ರೂ.ಗಳು.

Advertisement

ಅಂದ ಹಾಗೆ, ಗವರ್ನರ್‌ ಮತ್ತು ಉಪ ಗವರ್ನರ್‌ ನಡುವಿನ ವೇತನದಲ್ಲಿ ದೊಡ್ಡ ಮೊತ್ತದ ಅಂತರವೇನೂ ಇಲ್ಲ. ಗವರ್ನರ್‌ ತಿಂಗಳಿಗೆ 2.87 ಲಕ್ಷ ರೂ. ಪಡೆದರೆ, ಉಪ ಗವರ್ನರ್‌ 2.55 ಲಕ್ಷ ರೂ. ಪಡೆಯುತ್ತಾರೆ. ಅಂದರೆ, ಇವರ ವೇತನದ ನಡುವಿನ ಅಂತರ ಕೇವಲ 31,500 ರೂ. ಮಾತ್ರ ಎಂದು ಆರ್‌ಬಿಐ ಬಿಡುಗಡೆ ಮಾಡಿದ ವರದಿಯಿಂದ ತಿಳಿದುಬಂದಿದೆ. ಅಚ್ಚರಿಯೆಂದರೆ, ಆರ್‌ಬಿಐ ಗವರ್ನರ್‌ ವೇತನದ ಪರಿಷ್ಕರಣೆ ನಡೆದಿದ್ದು 3 ವರ್ಷಗಳ ಹಿಂದೆ.

ಇದೇ ವೇಳೆ, ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಎಚ್‌ಡಿಎಫ್ಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಡೆಯುವ ವೇತನ ತಿಂಗಳಿಗೆ 90 ಲಕ್ಷ ರೂ.ಗಳು ಎಂದು ಬ್ಯುಸಿನೆಸ್‌ ಟುಡೇ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next