Advertisement

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

11:07 AM Dec 21, 2024 | |

ಹೊಸದಿಲ್ಲಿ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುವಂತೆಯೇ ರೈತರ ಸಾಲ ಮನ್ನಾ, ಮಹಿಳೆ , ಯುವಕರಿಗೆ ನಗದು ವರ್ಗಾವಣೆ, ಉಚಿತ ವಿದ್ಯುತ್‌ ಯೋಜನೆಗಳ ಬಗ್ಗೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಇಂಥ ಯೋಜನೆಗಳಿಗೆ ಹೆಚ್ಚು ಮೊತ್ತ ವ್ಯಯಿಸಿದರೆ ಸಾಮಾಜಿಕ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯಾಗಲಿದೆ ಎಂದು ಎಚ್ಚರಿಸಿದೆ.

Advertisement

2018-19ನೇ ಸಾಲಿನಿಂದ ರಾಜ್ಯಗಳು ನೀಡಿದ ಸಬ್ಸಿಡಿ ಪ್ರಮಾಣ 2.5 ಪಟ್ಟು ಹೆಚ್ಚಾಗಿ, 4.7 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಕೆಲವು ರಾಜ್ಯಗಳಲ್ಲಿ ಬಂಡವಾಳ ವೆಚ್ಚಕ್ಕಿಂತ ರಾಜಸ್ವ ವೆಚ್ಚವೇ ಹೆಚ್ಚಿದ್ದು, ಪಂಜಾಬ್‌ನಲ್ಲಿ ಶೇ.17.1, ಪುದುಚೇರಿ ಶೇ.14.1, ಕೇರಳ ಶೇ.10.6, ದಿಲ್ಲಿಯಲ್ಲಿ ಶೇ.10.3 ಪ್ರಮಾಣದಲ್ಲಿದೆ.

ಸಬ್ಸಿಡಿ: 3ನೇ ಸ್ಥಾನ ಕರ್ನಾಟಕಕ್ಕೆ
ದೇಶದಲ್ಲಿ ಹೆಚ್ಚು ಸಬ್ಸಿಡಿ ನೀಡುವ ರಾಜ್ಯಗಳ ಪೈಕಿ ತಮಿಳುನಾಡು ಮೊದಲಿದೆ. ಇಲ್ಲಿ ಸಬ್ಸಿಡಿ 1.46 ಲಕ್ಷ ಕೋಟಿ ರೂ. ಇದೆ. 49,431 ಕೋಟಿ ರೂ. ಸಬ್ಸಿಡಿ ನೀಡಿ ಛತ್ತೀಸ್‌ಗಢ 2ನೇ ಸ್ಥಾನದಲ್ಲಿ, 47,400 ಕೋಟಿ ರೂ. ನೀಡಿ ಕರ್ನಾಟಕ 3ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next