ಹೊಸದಿಲ್ಲಿ: ದೇಶೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡ ಧೋಖಾ ಎಂದೆನಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಅಪಖ್ಯಾತಿ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕೊರಳಿಗೇ ಸುತ್ತಿಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ವಿಚಕ್ಷಣ ಆಯೋಗದ (ಸಿವಿಸಿ) ಆಯುಕ್ತರಾದ ಕೆ.ವಿ. ಚೌಧರಿ, ಹಗರಣ ನಡೆದಿರುವ ಅವಧಿಯಲ್ಲಿ ಆರ್‌ಬಿಐ, ಪಿಎನ್‌ಬಿಯ ಲೆಕ್ಕಪತ್ರಗಳನ್ನು ಸರಿಯಾಗಿ ಆಡಿಟ್ ಮಾಡದಿರುವುದೇ ಹಗರಣಕ್ಕೆ ಮೂಲ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಇಂಥ ವಂಚನೆ ತಡೆಗಟ್ಟಲು ಅತ್ಯಾಧುನಿಕ ಆಡಿಟಿಂಗ್ ವ್ಯವಸ್ಥೆ ಜಾರಿಗೊಳಿಸುವ ಅಗತ್ಯವಿದೆ ಎಂದೂ ಆಗ್ರಹಿಸಿದ್ದಾರೆ.
Advertisement