Advertisement

ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ವಂಚಿತರಾಗಬೇಡಿ: ಆರ್‌ಬಿಐ 

11:13 PM Sep 13, 2021 | Team Udayavani |

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ಖಾತೆಗಳ ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ಮೋಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಎಚ್ಚರವಾಗಿರಿ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಎಚ್ಚರಿಕೆ ನೀಡಿದೆ.

Advertisement

ಫೋನ್‌,  ಎಸ್‌ಎಂಎಸ್‌, ಇ-ಮೇಲ್‌ ಸೇರಿ ಹಲವು ಮಾರ್ಗ ದಲ್ಲಿ ಮೋಸಗಾರರು ಸಾರ್ವಜನಿಕರನ್ನು ಸಂಪರ್ಕಿಸಿ, ಕೆವೈಸಿ ಅಪ್‌ಡೇಟ್‌ ಮಾಡಿಕೊಡುವುದಾಗಿ ಹೇಳುತ್ತಾರೆ. ಅಪ್‌ಡೇಟ್‌ ಮಾಡದಿದ್ದರೆ, ಖಾತೆ ನಿಷ್ಕ್ರಿಯವಾಗುತ್ತದೆ ಎಂದು ಹೆದರಿಸುತ್ತಾರೆ. ಖಾತೆ ಸಂಖ್ಯೆ, ಲಾಗ್‌ಇನ್‌ ಮಾಹಿತಿ, ಒಟಿಪಿ, ಪಿನ್‌ನಂತಹ ಮಾಹಿತಿಯನ್ನು ಪಡೆಯುತ್ತಾರೆ. ಖಾತೆಯ ಸಂಪೂರ್ಣ ಹಿಡಿತವನ್ನು ಸಾಧಿಸಿಕೊಂಡು ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಈ ರೀತಿಯ ದೂರುಗಳು ಹೆಚ್ಚಾಗಿ ಕೇಳಿಬಂದಿವೆ.

ಹಾಗಾಗಿ ಯಾವುದೇ ಕಾರಣಕ್ಕೂ ಮಾಹಿತಿಯನ್ನು ಅನಧಿಕೃತ ಏಜೆನ್ಸಿ, ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ ಎಂದು ಆರ್‌ಬಿಐ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next