Advertisement

ಡಿಜಿಟಲ್‌ ಸಾಲ: ಆರ್‌ಬಿಐ ಅಂಕುಶ

12:16 AM Jan 20, 2021 | Team Udayavani |

ಹೊಸದಿಲ್ಲಿ: ಸಾಲ ನೀಡುವ ಡಿಜಿಟಲ್‌ ಆ್ಯಪ್‌ಗ್ಳಿಗೆ ಆರ್‌ಬಿಐಯು ಸದ್ಯದಲ್ಲಿಯೇ ಬಿಗಿ ಕಡಿವಾಣ ತೊಡಿಸುವ ಸಾಧ್ಯತೆ ಗಳಿವೆ. ಡಿಜಿಟಲ್‌ ಸಾಲ ಸಂಬಂಧ ಅಧ್ಯಯನ ನಡೆಸು ತ್ತಿರುವ ತಜ್ಞರ ಸಮಿತಿಯು ಈ ಸಂಬಂಧ ಆರ್‌ಬಿಐಗೆ ಶಿಫಾರಸು ಗಳನ್ನು ಸಲ್ಲಿಸಲಿದೆ. ಗ್ರಾಹಕರು ಮತ್ತು ಅವರ ನಿಕಟವರ್ತಿಗಳು, ಸಂಬಂಧಿಗಳ ಘನತೆಗೆ ಧಕ್ಕೆ ತರುವಂತೆ ಸಾಲ ಮರುಪಾವತಿಗಾಗಿ ಆಗ್ರಹಿಸುವ ರಿಕವರಿ ಏಜೆಂಟ್‌ ಗಳು ವರ್ತಿಸುವುದು, ವಿಳಂಬವಾಗಿ ಸಾಲ ಮರು ಪಾವತಿಸುವವರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಸಂದೇಶ ಕಳುಹಿಸಲು ಖಾಸಗಿ ಮೆಸೇಜಿಂಗ್‌ ಆ್ಯಪ್‌ಗ್ಳನ್ನು ಉಪಯೋಗಿಸುವುದರ ಮೇಲೆ ಆರ್‌ಬಿಐ ನಿಷೇಧ ಹೇರಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next