ನವದೆಹಲಿ: ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕ್ ಕಾರ್ಪ್ ಮತ್ತು ಡೈನರ್ಸ್ ಕ್ಲಬ್ ಕಾರ್ಡ್‌ಗಳ ಮಾರಾಟವನ್ನು ಮೇ 1ರಿಂದ ನಿರ್ಬಂಧಿಸಿ, ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ.
ಆದರೆ, ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಡ್‌ಗಳ ಮೇಲಿನ ವ್ಯವಹಾರಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದೆ.
2018ರ ಆರ್‌ಬಿಐ ನಿಯಮಗಳ ಪ್ರಕಾರ, ಈ ರೀತಿಯ ಸಂಸ್ಥೆಗಳು 6 ತಿಂಗಳ ಒಳಗಾಗಿ ತಮ್ಮ ಗ್ರಾಹಕರ ಮಾಹಿತಿಗಳನ್ನು ಭಾರತದಲ್ಲೇ ಇರುವ ಸಂಗ್ರಹ ವ್ಯವಸ್ಥೆಯಲ್ಲಿ ಸಂರಕ್ಷಿಸಿಡಬೇಕು. ಆದರೆ, ಇದನ್ನು ಪಾಲಿಸಿಲ್ಲ ಎಂದಿರುವ ಆರ್‌ಬಿಐ, ಅದೇ ಕಾರಣಕ್ಕಾಗಿ ಹೊಸ ಕಾರ್ಡ್‌ಗಳ ಮಾರಾಟಕ್ಕೆ ನಿರ್ಬಂಧ ಹಾಕಿರುವುದಾಗಿ ಹೇಳಿದೆ.
ಇದನ್ನೂ ಓದಿ :ಜನ ಸಾಯುತ್ತಿದ್ದರೆ ನೀವು ಮೋಜು ಮಾಡುತ್ತಿದ್ದಿರಿ: ಸೆಲೆಬ್ರಿಟಿಗಳ ವಿರುದ್ಧ ಸಿದ್ಧಕಿ ಆಕ್ರೋಶ