Advertisement

ಆರ್‌ಬಿಐ ಸಲಹಾ ಸಮಿತಿ ಸದಸ್ಯರಾಗಿ ವಿ.ರಾಮಚಂದ್ರ ನೇಮಕ

10:09 PM Jan 31, 2023 | Team Udayavani |

ಮಂಗಳೂರು: ದಿವಾಳಿಗೊಂಡ ಎರಡು ಹಣಕಾಸು ಸಂಸ್ಥೆಗಳ ನಿರ್ವಹಣೆ ಬಗ್ಗೆ ಸಲಹೆ ನೀಡಲು ರಚಿಸಿರುವ ಸಲಹಾ ಸಮಿತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಮಂಗಳೂರು ಮೂಲದ ವಿ.ರಾಮಚಂದ್ರ ಅವರನ್ನು ಸದಸ್ಯರನ್ನಾಗಿ ನೇಮಕಮಾಡಿದೆ.

Advertisement

ಸ್ರೀ ಇನ್‌ಫ್ರಾಸ್ಟ್ರಕ್ಚರ್‌ ಫೆ„ನಾನ್ಸ್‌(ಎಸ್‌ಐಎಫ್‌ಎಲ್‌) ಮತ್ತು ಸ್ರೀ ಎಕ್ವಿಪ್‌ಮೆಂಟ್‌ ಫೆ„ನಾನ್ಸ್‌(ಎಸ್‌ಇಎಫ್‌ಎಲ್‌) ಲಿಮಿಟೆಡ್‌ ಸಂಸ್ಥೆಗಳು ಹಣಕಾಸು ಬಿಕ್ಕಟ್ಟಿಗೆ ಒಳಗಾಗಿದ್ದು, 2021ರ ಅಕ್ಟೋಬರ್‌ನಲ್ಲಿ ಆರ್‌ಬಿಐ ಅದರ ಆಡಳಿತ ಮಂಡಳಿಯನ್ನು ಮುಟ್ಟುಗೋಲು ಹಾಕಿತ್ತು. ಈ ಸಂಸ್ಥೆಗಳ ನಿರ್ವಹಣೆ ನೋಡಿಕೊಳ್ಳುವ ಆಡಳಿತಗಾರರಿಗೆ ಸಲಹೆ ನೀಡಲು ಸಮಿತಿ ರಚಿಸಲಾಗಿದೆ. ಅದರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವಿ.ರಾಮಚಂದ್ರ ಅವರನ್ನು ನೇಮಕ ಮಾಡಿರುವುದಾಗಿ ಆರ್‌ಬಿಐ ತಿಳಿಸಿದೆ.

ಮೂಲತಃ ಮಂಜೇಶ್ವರದ ವರ್ಕಾಡಿಯವರಾದ ವಿ.ರಾಮಚಂದ್ರ ಅವರು ಕೆನರಾ ಬ್ಯಾಂಕ್‌ನಲ್ಲಿ 38 ವರ್ಷ ಸೇವೆ ಸಲ್ಲಿಸಿದ್ದು, ಉಡುಪಿ, ಮಂಗಳೂರು, ಬೆಂಗಳೂರು ಮತ್ತಿತರ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿದ್ದು, ಇತ್ತೀಚೆಗೆ ಕೆನರಾ ಬ್ಯಾಂಕ್‌ ಬೆಂಗಳೂರಿನಲ್ಲಿ ಸಿಜಿಎಂ ಆಗಿದ್ದು ನಿವೃತ್ತರಾಗಿದ್ದರು.
ಎಸ್‌ಐಎಫ್‌ಎಲ್‌ ಹಾಗೂ ಎಸ್‌ಇಎಫ್‌ಎಲ್‌ ಸಂಸ್ಥೆಗಳ ದಿವಾಳಿತನದ ಪರಿಹಾರ ಕಾರ್ಯ ಮುಗಿಯುವಲ್ಲಿ ವರೆಗೆ ಸದಸ್ಯರಾಗಿ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: ರಮೇಶ್‌ ಜಾರಕಿಹೊಳಿ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ

Advertisement

Udayavani is now on Telegram. Click here to join our channel and stay updated with the latest news.

Next