Advertisement
ಬ್ಯಾಂಕಿಂಗ್ ವಿಚಾರದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಲೆಕ್ಕವಿಲದಲದಿಷ್ಟು ಬ್ಯಾಂಕಿಂಗ್ ಸೈಬರ್ ವಂಚನೆಗಳು ನಡಯುತ್ತಿವೆ. ಈ ಸೈಬರ್ ವಂಚನೆಯ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ಈಗಾಗಲೇ ಹಲವಾರು ಬ್ಯಾಂಕುಗಳು ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿವೆ.
Related Articles
Advertisement
ಬ್ಯಾಂಕಿಂಗ್ ವಂಚನೆಗೆ ಒಳಗಾಗಿದ್ದಲ್ಲಿ ತಕ್ಷಣವೇ ಬ್ಯಾಂಕ್ ಗಳಿಗೆ ವಿಚಾರವನ್ನು ತಲುಪಿಸುವುದರ ಮೂಲಕ ನಿಮ್ಮ ಖಾತೆಗೆಯಲ್ಲಿದ್ದಷ್ಟು ಪೂರ್ತಿ ಹಣವನ್ನು ಮರಳಿ ಪಡೆಯಬಹುದು ಎಂದು ಆರ್ ಬಿ ಐ ಮಾಹಿತಿ ನೀಡಿದೆ.
ಪೂರ್ಣ ಹಣವನ್ನು ಹಿಂಪಡೆಯುವುದು ಸಾಧ್ಯವೇ.?
ಸೈಬರ್ ವಂಚನೆಯ ದೃಷ್ಟಿಯಿಂದ ಬ್ಯಾಂಕುಗಳು ವಿಮಾ ಪಾಲಿಸಿಯನ್ನು ಮಾಡುತ್ತದೆ. ನಿಮಗೆ ಸಂಭವಿಸಿದ ವಂಚನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ನೇರವಾಗಿ ವಿಮಾ ಕಂಪನಿಗೆ ತಿಳಿಸುತ್ತದೆ ಮತ್ತು ಅಲ್ಲಿಂದ ವಿಮಾ ಹಣವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಿಂದ ಯಾರಾದರೂ ನಿಮಗೆ ಗೊತ್ತಿಲ್ಲದೇ ಹಣವನ್ನು ಹಿಂತೆಗೆದುಕೊಂಡರೆ ಮತ್ತು ನೀವು ಮೂರು ದಿನಗಳೊಳಗೆ ಈ ವಿಷಯದ ಬಗ್ಗೆ ಬ್ಯಾಂಕಿಗೆ ದೂರು ನೀಡಿದರೆ, ನೀವು ಈ ನಷ್ಟ ಅನುಭವವಿಸಬೇಕಾಗಿಲ್ಲ. ಗ್ರಾಹಕರ ಖಾತೆಯಿಂದ ಮೋಸದಿಂದ ಪಡೆಯಲಾದ ಮೊತ್ತವನ್ನು ನಿಗದಿತ ಸಮಯದೊಳಗೆ ಬ್ಯಾಂಕ್ ಗೆ ತಿಳಿಸಿದರೆ ನಂತರ 10 -30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಿಂತಿರುಗಿಸಲಾಗುತ್ತದೆ. ಮೂರು ದಿನಗಳಾದ ಮೇಲೆ ಬ್ಯಾಂಕ್ ಖಾತೆ ವಂಚನೆ ಬಗ್ಗೆ ದೂರ ದಾಖಲಿಸಿದರೆ ಗ್ರಾಹಕರು 25 ಸಾವಿರ ರೂ.ಗಳ ನಷ್ಟವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆರ್ ಬಿ ಐ ಮಾಹಿತಿ ನೀಡಿದೆ.
ಇನ್ನು, ಸೈಬರ್ ವಂಚನೆಯಿಂದ ಪಾರಾಗಲು ನೀವು ವಿಮೆಯನ್ನು ಸಹ ಪಡೆಯಬಹುದು. ಬಜಾಜ್ ಅಲಿಯಾನ್ಸ್ ಮತ್ತು ಎಚ್ ಡಿ ಎಫ್ ಸಿ ಅರ್ಗೋ ಮುಂತಾದ ಕಂಪನಿಗಳು ಅಂತಹ ವಿಮೆಯನ್ನು ಒದಗಿಸುತ್ತವೆ. ಇದರಲ್ಲಿ, ನಿಮ್ಮ ಖಾತೆಯಲ್ಲಿ ಯಾವುದೇ ಸೈಬರ್ ವಂಚನೆ ನಡೆದರೆ ನಿಮ್ಮ ಹಣವನ್ನು ನೀವು ಮರಳಿ ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ : ಜೂ.15ರಿಂದ ಶೈಕ್ಷಣಿಕ ವರ್ಷಾರಂಭವಿಲ್ಲ; 2021-22ನೇ ಸಾಲಿನ ನೂತನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ