ನವದೆಹಲಿ: “ನನ್ನ ಪ್ರಕರಣದಲ್ಲಿಯೂ ನಿವೃತ್ತ ಐಪಿಎಸ್ ಅಧಿಕಾರಿ ಆರ್.ಬಿ.ಶ್ರೀಕುಮಾರ್ ಕಟ್ಟು ಕಥೆಗಳನ್ನು ಹೇಳಿದ್ದರು’- ಇದು ಇಸ್ರೋದ ನಿವೃತ್ತ ವಿಜ್ಞಾನಿ ನಂಬಿ ನಾರಾಯಣನ್ ನೀಡಿದ ಪ್ರತಿಕ್ರಿಯೆ.
ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕುಮಾರ್ ಬಂಧನದ ಬಗ್ಗೆ ಮಾತನಾಡಿದ ಅವರು ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ತೀರಾ ವಿವಾದಕ್ಕೆ ಕಾರಣವಾಗಿದ್ದ ಇಸ್ರೋ ಬೇಹುಗಾರಿಕೆ ಪ್ರಕರಣದ ತನಿಖೆಯನ್ನೂ ಶ್ರೀಕುಮಾರ್ ನಡೆಸಿದ್ದರು. “ಸುಳ್ಳು ಕಥೆಗಳನ್ನು ಕಟ್ಟಿದ್ದಕ್ಕಾಗಿ ಶ್ರೀಕುಮಾರ್‌ನ್ನು ಬಂಧಿಸಿದ್ದಾರೆಂಬ ವಿಚಾರ ತಿಳಿಯಿತು. ಅವರು ನನ್ನ ಪ್ರಕರಣದಲ್ಲೂ ಇದೇ ರೀತಿ ಮಾಡಿದ್ದರು. ಯಾರು ಬೇಕಾದರೂ ಏನಾದರೂ ಹೇಳಿಕೆ ಕೊಡುವಂತಹ ವ್ಯವಸ್ಥೆ ನಮ್ಮಲ್ಲಿದೆ. ಆದರೆ ಎಲ್ಲದಕ್ಕೂ ಮಿತಿಯಿದೆ.
ಇದನ್ನೂ ಓದಿ:ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ
ಸಭ್ಯತೆಯ ಮಿತಿ ಮೀರಿದ್ದಕ್ಕಾಗಿ ಶ್ರೀಕುಮಾರ್ ಬಂಧನವಾಗಿದೆ’ ಎಂದು ಹೇಳಿದ್ದಾರೆ.
ಬೇಹುಗಾರಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಂಬಿ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು.