Advertisement
ಬೆಳಗ್ಗೆಯಿಂದಲೇ ಮಠದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು, ಪೂಜಾ ಕಾರ್ಯಕ್ರಮ ನೆರವೇರಿದವು. ರಾಯರ ಮೂಲ ವೃಂದಾವನಕ್ಕೆ ವಿಶೇಷ ಅಲಂಕಾರ ಸೇವೆ ಜರಗಿತು. ಬೆಳಗಿನ ಜಾವ ನಿರ್ಮಾಲ್ಯ ವಿಸರ್ಜನೆ, ಗ್ರಂಥ ಪಾರಾಯಣ ಬಳಿಕ ವಿಶೇಷ ಅಭಿಷೇಕ ನೆರವೇರಿಸಲಾಯಿತು.
Related Articles
Advertisement
ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಶ್ರೀರಂಗಂ- ಅಹೋಬಲ ಕ್ಷೇತ್ರದಿಂದ ಬಂದ ಶೇಷವಸ್ತ್ರಗಳನ್ನು ಗುರುರಾಯರಿಗೆ ಸಮರ್ಪಣೆ ಮಾಡಲಾಗಿದೆ. ಈ ಎಲ್ಲ ಪುಣ್ಯಕ್ಷೇತ್ರಗಳ ಫಲ ಮಂತ್ರಾಲಯಕ್ಕೆ ಬಂದಿದ್ದು, ಮಂತ್ರಾಲಯದಲ್ಲಿ ಎಲ್ಲ ಪುಣ್ಯ ಕ್ಷೇತ್ರಗಳ ಸಮ್ಮಿಲನವಾಗುತ್ತಿದೆ. ಐತಿಹಾಸಿಕ ದೈವಿಕ ಕ್ಷೇತ್ರಗಳಿಂದ ಬಂದಿರುವ ಶೇಷವಸ್ತ್ರದ ಮೂಲಕ ರಾಯರು ಭಕ್ತರನ್ನು ಅನುಗ್ರಹಿಸುವರು. ಅಹೋಬಲ ಕ್ಷೇತ್ರದ ನರಸಿಂಹಸ್ವಾಮಿ ಹಾಗೂ ಶ್ರೀರಂಗಂ ಕ್ಷೇತ್ರದೊಂದಿಗೆ ಶ್ರೀಮಠ ಅವಿನಾಭಾವ ಸಂಬಂಧ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಸಂಪತ್ ಕುಮಾರ್, ಪ್ರಧಾನ ಅರ್ಚಕ ರಮೇಶ್ ಆರ್ಚಾಯ, ಶ್ರೀ ರಂಗಂ ಕ್ಷೇತ್ರದ ಗೋಪಾಲನ್, ವಿದ್ವಾನ್ ಸು ಧೀಂದ್ರ ಆಚಾರ್ಯ, ಶ್ರೀಧರ ಆಚಾರ್ಯ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್ ಸಹಿತ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಪೂರ್ವಾರಾಧನೆಗೆ ವಿವಿಧೆಡೆಯಿಂದ ಭಕ್ತರ ದಂಡು ಹರಿದು ಬಂದಿತ್ತು. ರಾಯರ ದರ್ಶನಾಶೀರ್ವಾದ ಪಡೆದು ಪುನೀತರಾದರು.