ಹುಬ್ಬಳ್ಳಿ: ಇಲ್ಲಿನ ಭವಾನಿನಗರದ ನಂಜನಗೂಡು ರಾಯರ ಮಠದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನೆಯ ನಿಮಿತ್ತ ಮಮಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಫಲಪಂಚಾಮೃತಾಭಿಷೇಕ, ಕನಕಾಭಿಷೇಕ, ತುಳಸಿ ರ್ಚನ ಹಸ್ತೋದಕ, ನೈವೇದ್ಯ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಬೆಳಗಾವಿಯ ಬಿ.ಎಂ.ಆಚಾರ್ಯ ಹಾಗೂ ಬಿಂದಾಚಾರ್ಯ ಅರ್ಚಕ ಅವರಿಂದ ರಾಯರ ಕುರಿತು ಪ್ರವಚನ ನಡೆಯಿತು.
ಸಂಜೆ ಶ್ರೀಮಠದ ವ್ಯವಸ್ಥಾಪಕ ದ್ವಾರಕಾನಾಥಾಚಾರ್ಯ ಅವರಿಂದ ಪ್ರವಚನ ನಡೆಯಿತು. ನಂತರ ರಾಯರಿಗಾಗಿ ರಜತ ರಥೋತ್ಸವ, ವಿಪ್ರರಿಂದ ಸ್ವಸ್ತಿವಾಚನ, ಅಷ್ಟಾವಧಾನ, ತೊಟ್ಟಿಲು ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆದವು.
ಧರ್ಮಾಧಿಕಾರಿ ರಾಘವೇಂದ್ರಾಚಾರ್ಯ, ಶ್ರೀನಿಧಿ ನರಗುಂದ, ಅಪರಂಜಿ, ಗೋಪಾಲ ಕುಲಕರ್ಣಿ, ಮನೋಹರ ಪರ್ವತಿ, ಅರುಣ ಅಪರಂಜಿ, ಶ್ಯಾಮಾಚಾರ್ಯ ರಾಯಸ್ತ, ಬಿಂದುಮಾಧವ ಪುರೋಹಿತ ಸೇರಿದಂತೆ ಇನ್ನಿತರರು ಇದ್ದರು.
ಇನ್ನು ದೇಶಪಾಂಡೆ ನಗರದ ಶ್ರೀ ಕೃಷ್ಣ ಮಂದಿರದಲ್ಲಿ ಹಾಗೂ ಕೇಶ್ವಾಪುರ ಕುಬೇರಪುರಂದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೇವರಿಗೆ ವಿಶೇಷ ಅಲಂಕಾರ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ನಡೆದವು.