Advertisement

ರಾಯಣ್ಣ ಅಪ್ರತಿಮ ವೀರ

05:41 PM Jan 27, 2020 | Suhan S |

ಮಾಗಡಿ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೀವ ತೆತ್ತ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯ ಕುರುಬರ ಸಂಘದ ನಿರ್ದೇಶಕ ಹಾಗೂ ತಾಲೂಕು ಅಧ್ಯಕ್ಷ ಎಂ.ಸಿ.ರಾಜಣ್ಣ ತಿಳಿಸಿದರು.

Advertisement

ಮಾಗಡಿ ಪಟ್ಟಣದ ಕುರುಬರ ಸಂಘದ ಕಚೇರಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹುತ್ಮಾತ ದಿನದ ಪ್ರಯುಕ್ತ ಸಂಗೊಳ್ಳಿ ರಾಯಣ್ಣ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ರಕ್ತದ ಕಣಕಣದಲ್ಲಿ ದೇಶ ಪ್ರೇಮ, ದೇಶಭಕ್ತಿ ತುಂಬಿತ್ತು. ಕಿತ್ತೂರು ರಾಣಿ ಚೆನ್ನಮ್ಮ ಸೇನೆಯ ಅಧಿಪತಿ ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರ. ಬೆಳಗಾವಿ ಜಿಲ್ಲೆ ಬೈರಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣ ಕುರುಬ ಸಮಾಜದಲ್ಲಿ ಹುಟ್ಟಿದವನು. ಕೇವಲ 32 ವರ್ಷಗಳ ಕಾಲ ಬದುಕಿ ವೀರ ಮರಣ ಹೊಂದಿದ್ದು, ನಮ್ಮೆಲ್ಲರ ದುರಂತ. ಅವರಂತೆ ನಾವೆಲ್ಲರೂ ದೇಶಭಕ್ತಿ, ದೇಶಪ್ರೇಮ ಬೆಳೆಸಿಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಭದ್ರ ರಾಷ್ಟ್ರ ಕಟ್ಟೋಣ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಶಿವಕುಮಾರ್‌ ಮಾತನಾಡಿ, ಬಡವರ ಭೂಮಿಯನ್ನು ಕಸಿದು ಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧವೇ ಸಿಡಿದು ನಿಂತ ಕ್ರಾಂತಿಕಾರ ವೀರ ಸಂಗೊಳ್ಳಿ ರಾಯಣ್ಣ, ಗೆರಿಲ್ಲಾ ಯುದ್ಧ ದ ಹರಿಕಾರ ಎಂದೇ ಖ್ಯಾತಿಹೊಂದಿದ್ದ ರಾಯಣ್ಣನ ಸಾಧನೆ, ದೇಶ ಸೇವೆ ಅಪ್ರತಿಮವಾದುದು ಎಂದು ಹೇಳಿದರು.

ಸಂಘದ ಕಾರ್ಯಾಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎಚ್‌.ಆರ್‌. ಮಂಜುನಾಥ್‌, ನಿರ್ದೇಶಕರಾದ ಯಶೋಧಮ್ಮ, ರಾಜಣ್ಣ, ಚೆನ್ನರಾಜು, ಬಿರೇಶ್‌, ನಿರಂಜನ್‌ ಉಮಾಶೆಂಕರ್‌, ಶಿವರಾಜು, ಬಲರಾಮು, ರಕ್ಷಿತ್‌, ಶಿವ ಪ್ರಸಾದ್‌, ವಕೀಲ ರಾಜಯ್ಯ, ಎಚ್‌. ಆರ್‌.ರುದ್ರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next