Advertisement

ಮಳಿಗೆ ದುರಸ್ತಿ, ಮರು ಹರಾಜಿನತ್ತ ನಗರಸಭೆ ಚಿತ್ತ

03:10 PM Oct 20, 2021 | Team Udayavani |

ರಾಯಚೂರು: ಬಹುವರ್ಷಗಳಿಂದ ನನೆಗುದಿಗೆ ಬಿದ್ದನಗರಸಭೆ ಮಳಿಗೆಗಳ ಪುನರುಜ್ಜೀವನ ಕಾರ್ಯಕ್ಕೆ ಕೊನೆಗೆಕಾಲ ಸನ್ನಿಹಿತವಾದಂತಾಗಿದೆ. ಕೆಲವೊಂದು ಮಳಿಗೆಗಳದುರಸ್ತಿ ಕಾರ್ಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿದ್ದರೆ; ಅನೇಕಮಳಿಗೆಗಳನ್ನು ಖಾಲಿ ಮಾಡಿಸಿ ಮರು ಟೆಂಡರ್‌ನಡೆಸುವತ್ತ ನಗರಸಭೆ ಚಿತ್ತ ಹರಿಸಿದೆ.ನಗರಸಭೆ ಪ್ರತಿ ಸಾಮಾನ್ಯ ಸಭೆಯಲ್ಲೂ ಮಳಿಗೆಗಳವಿಚಾರ ಪ್ರಸ್ತಾಪವಾಗುತ್ತಲೇ ಇರುತ್ತದೆ.

Advertisement

ಮಳಿಗೆಗಳಿಂದನಿರೀಕ್ಷಿತ ಆದಾಯ ಬರುತ್ತಿಲ್ಲ. ನಿರ್ವಹಣೆ ಕೊರತೆಇದ್ದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ ಎಂಬಿತ್ಯಾದಿವಿಚಾರ ಚರ್ಚೆ ಆಗುತ್ತಲೇ ಇದ್ದವು. ಸುಮಾರು294ಕ್ಕೂ ಅ ಧಿಕ ಮಳಿಗೆಗಳಿದ್ದರೆ, ನಗರಸಭೆ ಪ್ರತಿತಿಂಗಳು ಕೇವಲ 90 ಸಾವಿರದ ಆಸುಪಾಸುಬಾಡಿಗೆ ಹಣ ಬರುತ್ತಿದೆ.

ಈ ಹಿಂದೆ ಅತಿ ಕಡಿಮೆದರಕ್ಕೆ ಬಾಡಿಗೆ ನೀಡಿದ್ದು, ಇಂದಿಗೂ ಅದೇ ಬಾಡಿಗೆಮುಂದುವರಿದಿದೆ. ಕೆಲವೊಂದು ಮಳಿಗೆ ಯಾರೋಕಡಿಮೆ ದರಕ್ಕೆ ಬಾಡಿಗೆ ಪಡೆದು ದುಬಾರಿ ಹಣಕ್ಕೆಮತ್ತೂಬ್ಬರಿಗೆ ಬಾಡಿಗೆ ನೀಡಿದ ನಿದರ್ಶನಗಳುಇವೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ನಷ್ಟಎದುರಿಸುವಂತಾಗಿತ್ತು.ಅಲ್ಲದೇ, ಮಳಿಗೆಗಳ ವಿಚಾರಕ್ಕೆ ಕೆಲವರುನ್ಯಾಯಾಲಯ ಮೆಟ್ಟಿಲೇರಿದ್ದರ ಪರಿಣಾಮ ಇಷ್ಟುದಿನ ಯಾವುದೇ ಚಟುವಟಿಕೆಗಳು ನಡೆಸಲುಆಗಿರಲಿಲ್ಲ.

ಈಗ ನ್ಯಾಯಾಲಯದಲ್ಲಿದ್ದ ಪ್ರಕರಣಗಳುಇತ್ಯರ್ಥಗೊಂಡಿದ್ದು, ಶೀಘ್ರದಲ್ಲೇ ಮಳಿಗೆಗಳಪುನರುಜ್ಜೀವನ ಕಾರ್ಯ ಕೈಗೊಳ್ಳುತ್ತೇವೆ ಎನ್ನುತ್ತಾರೆನಗರಸಭೆ ಅ ಧಿಕಾರಿಗಳು.

ವ್ಯಾಪಾರಿಗಳಿಗೆ ನೋಟಿಸ್‌ ಜಾರಿ: ನಗರಸಭೆಯಿಂದಈಗಾಗಲೇ ವ್ಯಾಪಾರಿಗಳಿಗೆ ನೋಟಿಸ್‌ ಕೂಡಜಾರಿ ಮಾಡಲಾಗಿದೆ. ಪ್ರತಿ ವ್ಯಾಪಾರಿಗೆ ಏಳುನೋಟಿಸ್‌ ಜಾರಿ ಮಾಡಿದ್ದು, ಕಾನೂನಾತ್ಮಕ ಪ್ರಕ್ರಿಯೆಪೂರ್ಣಗೊಳಿಸಲಾಗಿದೆ. ಇನ್ನೇನಿದ್ದರೂ ನಗರಸಭೆಮಳಿಗೆಗಳನ್ನು ಸ್ವಾ ಧೀನಪಡಿಸಿಕೊಂಡು ಮರುಹರಾಜು ಹಾಕುವ ಕೆಲಸ ಬಾಕಿ ಇದೆ ಎನ್ನಲಾಗುತ್ತಿದೆ.

Advertisement

ಈಹಿಂದೆ ಕೂಡ ನೋಟಿಸ್‌ ಜಾರಿ ಮಾಡಿಯೇ ಹರಾಜುಮಾಡಲಾಗಿತ್ತು. ಆದರೆ, ಮಳಿಗೆಗಳನ್ನು ನಗರಸಭೆಕಾನೂನಾತ್ಮಕವಾಗಿ ಸ್ವಾ ಧೀನಪಡಿಸಿಕೊಂಡಿರಲಿಲ್ಲ.

ಇದರಿಂದ ವರ್ತಕರು ತಿರುಗಿಬಿದ್ದಿದ್ದರು. ಆದರೆ,ಈ ಬಾರಿ ನಗರಸಭೆ ಎಚ್ಚರಿಕೆ ಹೆಜ್ಜೆಯನ್ನಿಡುತ್ತಿದ್ದು,ವ್ಯಾಪಾರಸ್ಥರು ಯಾವುದೇ ರೀತಿಯಲ್ಲೂ ಹಿಡಿತ ಸಾಧಿಸಲು ಸಾಧ್ಯವಾಗದ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ.

ಮಳಿಗೆಗಳ ದುರಸ್ತಿಗೆ ಆದ್ಯತೆ: ನಗರಸಭೆಯಲ್ಲಿಸಾಕಷ್ಟು ಮಳಿಗೆಗಳಿದ್ದು, ಅದರಲ್ಲಿ 106 ಮಳಿಗೆಗಳುಸಾಕಷ್ಟು ಶಿಥಿಲಗೊಂಡಿವೆ. ಫ್ಲೋರಿಂಗ್‌ ವ್ಯವಸ್ಥೆಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಸೋರುವಹಂತದಲ್ಲಿವೆ.

ಅಲ್ಲದೇ, ವಿದ್ಯುತ್‌ ಸಂಪರ್ಕವೂಇಲ್ಲದಾಗಿದೆ. ಅವುಗಳ ದುರಸ್ತಿ ಬಗ್ಗೆ ನಗರಸಭೆಯಲ್ಲಿಚರ್ಚಿಸಿ ಅನುಮೋದನೆ ಕೂಡ ಪಡೆಯಲಾಗಿದೆ.ಆದರೆ, ನಗರಸಭೆ ಹಣಕಾಸಿನ ಅಭಾವ ಎದ್ದುಕಾಣುತ್ತಿದ್ದು, ದುರಸ್ತಿಗೆ ಹಣ ಹೊಂದಿಸುವುದೇಸವಾಲು ಎನ್ನಲಾಗುತ್ತಿದೆ. ಈಗ ಬರುವ ಬಾಡಿಗೆ ಹಣನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದು, ಹೆಚ್ಚುವರಿ ಹಣಹೊಂದಿಸಿ ದುರಸ್ತಿ ಕಾರ್ಯ ಮಾಡಬೇಕಿರುವ ಸವಾಲುನಗರಸಭೆ ಮುಂದಿದೆ.

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next