Advertisement

ಶಾಂತಿಯುತ ಚುನಾವಣೆ ನಡೆಸಲು ಸಹಕರಿಸಿ

03:39 PM Apr 10, 2019 | Naveen |

ರಾಯಚೂರು: ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ
ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ
ಶಾಂತಿಯುತವಾಗಿ ಚುನಾವಣೆ ನಡೆಯಲು ಸಹಕರಿಸಬೇಕು ಎಂದು
ಜಿಲ್ಲಾ ಚುನಾವಣಾಧಿ ಕಾರಿ ಶರತ್‌ ಬಿ. ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ
ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗಾಗಿ ಹಮ್ಮಿಕೊಂಡಿದ್ದ
ಚುನಾವಣೆ ನೀತಿ ಸಂಹಿತೆ ಪಾಲಿಸುವ ಕುರಿತ ಸಭೆಯಲ್ಲಿ ಅವರು
ಮಾತನಾಡಿದರು. ಯಾವುದೇ ಮತದಾರ ಭಯ, ದಾಕ್ಷಿಣ್ಯಕ್ಕೆ
ಒಳಗಾಗಿ ಮತ ಹಾಕಬಾರದು ಎಂಬುದು ಸಂವಿಧಾನದ ಆಶಯ.ಅದಕ್ಕಾಗಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಖಾಸಗಿ ಸ್ಥಳಗಳಲ್ಲಿ ಚುನಾವಣಾ ಸ್ಪರ್ಧಿಗಳ ಅಥವಾ ಪಕ್ಷಗಳ ಬ್ಯಾನರ್‌, ಪೋಸ್ಟರ್‌ ಹಾಕಬಾರದು. ನೀತಿ ಸಂಹಿತೆ ಜಾರಿಯಾಗುವುದರೊಳಗೆ ಸಿವಿಲ್‌ ಕಾಮಗಾರಿ ಆರಂಭವಾಗಿದ್ದಲ್ಲಿ
ಮಾತ್ರ ಮುಂದುವರಿಸಬಹುದು. ಆದರೆ, ಯಾವುದೇ
ಹೊಸ ಕಾಮಗಾರಿ ಕೈಗೊಳ್ಳುವಂತಿಲ್ಲ. ಕುಡಿಯುವ ನೀರಿಗೆ ಸಂಬಂ ಧಿಸಿದ ಕಾಮಗಾರಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು
ಹೇಳಿದರು.

ಭದ್ರತೆ, ಅಕ್ರಮ ತಡೆಗಟ್ಟುವ ಉದ್ದೇಶದಿಂದ ಪ್ರತಿ ವಾಹನ ತಪಾಸಣೆ ನಡೆಸಲಾಗುವುದು. ಸರ್ಕಾರಿ ನೌಕರರು ಯಾವುದೇ ಜನಪ್ರತಿನಿಧಿ ಗಳನ್ನು ಖಾಸಗಿ ಸ್ಥಳಗಳಲ್ಲಿ ಭೇಟಿ ಮಾಡಿದರೆ ಅವರ
ವಿರುದ್ಧ ಸೂಕ್ತ ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಸಿದರು.
ಕೋಮು ಗಲಭೆಗೆ ಆಸ್ಪದ ನೀಡುವ ಭಾಷಣ, ಟೀಕೆ ಮಾಡಬಾರದು. ಜಾತಿ, ಪಂಗಡ, ಭಾಷೆಗಳನ್ನು ಟೀಕಿಸಬಾರದು.

ರಾಜಕೀಯ ಪಕ್ಷಗಳು ಕರಪತ್ರ ಮುದ್ರಿಸಿಕೊಂಡಲ್ಲಿ ಈ ಬಗ್ಗೆ ಸೂಕ್ತ
ದಾಖಲೆ ಪಡೆಯಬೇಕು ಎಂದು ಸೂಚಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಮತದಾನದ ದಿನದಂದು ಮತದಾರರಿಗೆ ರಾಜಕೀಯ ಪಕ್ಷಗಳು ವಾಹನಗಳ ನೆರವು ನೀಡಬಾರದು ಎಂದು ತಿಳಿಸಿದರು.

Advertisement

ಚುನಾವಣಾ ವೀಕ್ಷಕಿ ಶೈಲಾ ಎ., ಪೊಲೀಸ್‌ ವೀಕ್ಷಕ ಡಿ.ವೈ. ಮಾಂಡಲೀಕ್‌, ಚುನಾವಣಾ ವೆಚ್ಚ ವೀಕ್ಷಕ ವಿ.ಕೆ.ಚಕ್ರವರ್ತಿ, ಜಿಪಂ
ಸಿಇಒ ನಲಿನ್‌ ಅತುಲ್‌, ಎಸ್‌ಪಿ ಡಿ.ಕಿಶೋರಬಾಬು, ಸಹಾಯಕ ಚುನಾವಣಾ ಧಿಕಾರಿ ವೆಂಕಟೇಶ ಇತರರಿದ್ದರು.

ಪಕ್ಷಗಳು ಅಥವಾ ಅಭ್ಯರ್ಥಿಗಳು 24 ಗಂಟೆಗೂ ಮುನ್ನ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗೆ ಅನುಮತಿ ಪಡೆಯಬೇಕು. ಬೆಳಗಿನ 10ರಿಂದ ಸಂಜೆ 6 ಗಂಟೆವರೆಗೆ ಲೌಡ್‌ ಸ್ವೀಕರ್‌ ಬಳಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕೈಗೊಂಡಲ್ಲಿ ನಮೂನೆ 26ರಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಖಾತೆಗಳಲ್ಲಿಯೇ ಪ್ರಚಾರ ಕೈಗೊಳ್ಳಬೇಕು. ಇಲೆಕ್ಟ್ರಾನಿಕ್‌ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ಪ್ರಚಾರ ಮಾಡಬೇಕಿದ್ದಲ್ಲಿ ಎಂಸಿಎಂಸಿ ಸಮಿತಿ ಪೂರ್ವಾನುಮತಿ ಕಡ್ಡಾಯ.
ಶರತ್‌ ಬಿ.,
ಜಿಲ್ಲಾ ಚುನಾವಣಾಧಿಕಾ

Advertisement

Udayavani is now on Telegram. Click here to join our channel and stay updated with the latest news.

Next