Advertisement

ರಫೆಲ್‌ ಅಕ್ರಮ ನಡೆದಿದ್ದರೆ ದಾಖಲೆ ಕೊಡಲಿ

03:24 PM Apr 21, 2019 | Team Udayavani |

ರಾಯಚೂರು: ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂದಿ, ಅವ್ಯವಹಾರದ ದಾಖಲೆ ಬಿಡುಗಡೆ ಮಾಡಿ ಸಾಬೀತು ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಸವಾಲು ಹಾಕಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ ಮೋದಿ ಮತ್ತೂಮ್ಮೆ ನವ ಭಾರತ ನಿರ್ಮಾಣ ಕುರಿತು ಪ್ರಬುದ್ಧರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮೋದಿಯವರು ಒಂದೂ ಭ್ರಷ್ಟಾಚಾರ ಮಾಡಿಲ್ಲ. ಐದು ವರ್ಷದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಮೊತ್ತದ ಟೆಂಡರ್‌ ಕರೆದರೂ ನಯಾ ಪೈಸೆ ಅಕ್ರಮ ನಡೆದಿಲ್ಲ. ಹೀಗಾಗಿ ಅವರಿಗೆ ಅದನ್ನು ಸಾಬೀತು ಮಾಡಲು ಆಗುತ್ತಿಲ್ಲ.
12 ನಿಮಿಷ ಭಾಷಣ ಮಾಡಿದರೆ ರಾಹುಲ್‌ ಗಾಂಧಿಗೆ ವಿಶ್ರಾಂತಿ ಬೇಕು. ಇಂಥವರಿಂದ ದೇಶದ ಪ್ರಗತಿ ಹೇಗೆ ಸಾಧ್ಯ ಎಂದು ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮೊಮ್ಮಗನಿಗಾಗಿ
ತಮ್ಮ ಕ್ಷೇತ್ರವನ್ನೇ ತ್ಯಾಗ ಮಾಡಿದರು. ಆದರೆ, ಈ ಬಾರಿ ಕುಟುಂಬ ರಾಜಕಾರಣ ಮಾಡುತ್ತಿರುವ ದೇವೇಗೌಡ, ರಾಯಚೂರು ಸಂಸದ ಬಿ.ವಿ.ನಾಯಕ ಸೋಲು ಖಚಿತ ಎಂದರು.

ಉಜ್ವಲ ಯೋಜನೆಯಡಿ 6.97 ಕೋಟಿ ಸಿಲಿಂಡರ್‌ ವಿತರಣೆ, 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದಾರೆ. ಇದು ಕೆಳಮಟ್ಟದ ಜನರ ಗಮನಕ್ಕೆ ಬರಬೇಕಾದರೆ ಇನ್ನೂ ಐದು ವರ್ಷ ಮೋದಿಯವರಿಗೆ ಅಧಿಕಾರ ನೀಡಬೇಕು ಎಂದರು.

ನಿವೃತ್ತ ಸೈನಿಕರ ಸಂಘ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಘೋಷಿಸಿತು. ಮಾಜಿ ಸಚಿವ ಸಿ.ಟಿ. ರವಿ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿದರು. ಶಾಸಕರಾದ ಡಾ|
ಶಿವರಾಜ ಪಾಟೀಲ, ರಾಜುಗೌಡ, ಸಂಸದರಾದ ಪಿ.ಸಿ. ಮೋಹನ, ಮಾಜಿ ಸಚಿವ ನಾರಾಯಣಸ್ವಾಮಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಎನ್‌.ಶಂಕ್ರಪ್ಪ, ವಿಭಾಗಿಯ ಉಸ್ತುವಾರಿ ಅಶೋಕ ಗಸ್ತಿ, ಬಿಜೆಪಿ
ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next