Advertisement

ಬಲಿಷ್ಠ ಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ: ಸೋಮಣ್ಣ

01:47 PM Apr 21, 2019 | Team Udayavani |

ಮಾನ್ವಿ: ಭಾರತದ ಸರ್ವಾಂಗೀಣ ಅಭಿವೃದ್ಧಿ, ಸುಭದ್ರತೆಗಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಪ್ರತಿಯೊಬ್ಬ ಮತದಾರರು ಬಿಜೆಪಿಗೆ ಮತ ನೀಡಿ ಮೋದಿ ಮತ್ತೆ ಪ್ರಧಾನಿ ಆಗಲು ಕೈಜೋಡಿಸಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಹೇಳಿದರು.

Advertisement

ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ
ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.

ಇಡೀ ವಿಶ್ವವನ್ನೇ ಭಾರತದ ಕಡೆಗೆ ನೋಡುವಂತೆ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಿಟ್ಟ ಕ್ರಮಗಳೇ ಸಾಕ್ಷಿಯಾಗಿವೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ್‌ದಲ್ಲಿನ ಉಗ್ರರ ತಾಣಗಳ ಮೇಲೆ ಏರ್‌ ಸರ್ಜಿಕಲ್‌ ಸ್ಟ್ರೈಕ್ ನಡೆಸಿದ ಕೀರ್ತಿ ಮೋದಿಗೆ ಸಲ್ಲುತ್ತದೆ. ಈ ದೇಶವನ್ನು ಕಳೆದ 60 ವರ್ಷಕ್ಕಿಂತ ಹೆಚ್ಚು ಆಳ್ವಿಕೆ ನಡೆಸಿರುವ ಕಾಂಗ್ರೆಸ್‌ ದೇಶದ ಪ್ರಗತಿ ಮಾಡುವಲ್ಲಿ ಸಂಪೂರ್ಣ
ವಿಫಲವಾಗಿದೆ ಎಂದು ಟೀಕಿಸಿದರು.

ಕೇವಲ ಅಧಿಕಾರಕ್ಕಾಗಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿರುವುದು, ವಿಶ್ವಬ್ಯಾಂಕ್‌ ನಿಂದ ಸಾಲ ಪಡೆಯಲು ದೇಶದ ಸಂಪತ್ತನ್ನು ಒತ್ತೆಯಿಟ್ಟಿರುವುದು ಸೇರಿದಂತೆ ಭ್ರಷ್ಟಾಚಾರ,
ಹಗರಣಗಳೇ ಕಾಂಗ್ರೆಸ್‌ ಸಾಧನೆಯಾಗಿವೆ. ಕಳೆದ 3 ವರ್ಷಗಳಿಂದ ವಿದೇಶಗಳಿಂದ ಸಾಲದ ನೆರವು ಪಡೆಯದೆ ದೇಶವನ್ನು ಪ್ರಗತಿಯತ್ತ ಮುನ್ನೆಡೆಸುವುದರ ಜೊತೆಗೆ 30 ಲಕ್ಷ ಕೋಟಿ ಸಾಲ ತೀರಿಸಿದ ಹೆಗ್ಗಳಿಕೆ ಪ್ರಧಾನಿ ಮೋದಿಗೆ ಸಲ್ಲುತ್ತದೆ ಎಂದ ಅವರು, ದೇಶದ ಭವಿಷ್ಯಕ್ಕಾಗಿ ಮತ್ತು ಸುಭದ್ರತೆಗಾಗಿ ಬಿಜೆಪಿಗೆ ಮತ ನೀಡಿ ರಾಯಚೂರು ಲೋಕಸಭೆ ಕ್ಷೇತ್ರದ ರಾಜಾ ಅಮರೇಶ್ವರ ನಾಯಕರನ್ನು ಆಯ್ಕೆಗೊಳಿಸಬೇಕೆಂದು ವಿನಂತಿಸಿದರು.

ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿ, ರಾಯಚೂರ ಲೋಕಸಭೆ ಕ್ಷೇತ್ರದ ಸಂಸದ ಬಿ.ವಿ.ನಾಯಕ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳದೆ ಕುಂಭಕರ್ಣ ನಿದ್ರೆಗೆ ಜಾರಿದ್ದ ಬಿ.ವಿ.ನಾಯಕರಿಗೆ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಹೇಳಿದರು.

Advertisement

ಸಂಸದನಾಗಿ ಆಯ್ಕೆಯಾದಲ್ಲಿ ಪೋತ್ನಾಳದಲ್ಲಿ ರೈಲು ನಿಲ್ದಾಣ ಸ್ಥಾಪನೆಗೆ ಯತ್ನಿಸಲಾಗುವುದು.
ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗೆ
ಆದ್ಯತೆ ನೀಡಲಾಗುವುದು ಎಂದರು. ಶಾಸಕ
ಕೆ.ಶಿವನಗೌಡ ನಾಯಕ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಸಿರವಾರ,
ತ್ರಿವಿಕ್ರಮ ಜೋಶಿ, ಕೊಟ್ರೇಶಪ್ಪ ಕೋರಿ, ಉಮೇಶ
ಸಜ್ಜನ, ಬಿ.ಮಾನಪ್ಪ ನಾಯಕ, ವಿಶ್ವನಾಥ ರೆಡ್ಡಿ ತೋರಣದಿನ್ನಿ, ಬಸವರಾಜ ನಾಡಗೌಡ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಸಂಗಾಪುರ, ಶರಣಪ್ಪಗೌಡ ನಕ್ಕುಂದಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ತಿಮ್ಮಾರೆಡ್ಡಿ ಭೋಗಾವತಿ, ಬಿಜೆಪಿ ಮುಖಂಡರಾದ ಡಾ|ಶರಣಪ್ಪ ಬಲ್ಲಟಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next