Advertisement

ಶಹಾಪುರ ಮತದಾರರ ಒಲವು ಯಾರ ಕಡೆ?

01:36 PM Apr 19, 2019 | Team Udayavani |

ಶಹಾಪುರ: ಯಾದಗಿರಿ ಜಿಲ್ಲೆ ಶಹಾಪುರ ವಿಧಾನಸಭೆ ಕ್ಷೇತ್ರ ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹಣಾಹಣಿ ಕಂಡು ಬಂದಿದೆ.

Advertisement

ಕಳೆದ ಬಾರಿ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದ ಬಿ.ವಿ. ನಾಯಕ ಮತ್ತೂಮ್ಮೆ ಅದೇ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2014ರಲ್ಲಿ ಬಿ.ವಿ. ನಾಯಕ ಪ್ರತಿಸ್ಪ ರ್ಧಿಯಾಗಿ ಬಿಜೆಪಿಯಿಂದ ದೇವದುರ್ಗ ಶಾಸಕ ಶಿವನಗೌಡ ನಾಯಕ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅಂದಿನ ಜಿದ್ದಾಜಿದ್ದಿ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಶೀವನಗೌಡ ನಾಯಕ ಶಹಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ 5 ಸಾವಿರ ಮತ ಹೆಚ್ಚಿಗೆ ಪಡೆದಿದ್ದರು.

ಬಿ.ವಿ. ನಾಯಕ ಮತ್ತೇ ಕಾಂಗ್ರೆಸ್‌ ಸ್ಪರ್ಧಿಸಿದ್ದರೆ, ಎದುರಾಳಿಯಾಗಿ
ಬಿಜೆಪಿಯಿಂದ ರಾಜಾ ಅಮರೇಶ್ವರ ನಾಯಕ ಕಣದಲ್ಲಿದ್ದಾರೆ.
ಈಗಲೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತುರುಸಿನ ಗುದ್ದಾಟ
ನಡೆದಿದೆ ಎನ್ನಬಹುದು. ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಸುರಪುರ ಶಾಸಕ ರಾಜೂಗೌಡ, ದೇವದುರ್ಗ ಶಾಸಕ ಶಿವನಗೌಡ ನಾಯಕ ಸೇರಿದಂತೆ ಮಾಜಿ ಶಾಸಕ ಗುರು ಪಾಟೀಲ ಟೊಂಕ ಕಟ್ಟಿ ನಿಂತಿದ್ದಾರೆ.

ಕ್ಷೇತ್ರದಲ್ಲಿ ಎರಡು ಪಕ್ಷಗಳ ನಾಯಕರ ಅಬ್ಬರದ ಪ್ರಚಾರ ನಡೆದಿದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಇರುವುದರಿಂದ ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಇಲ್ಲ. ಆದರೆ ಕ್ಷೇತ್ರದಲ್ಲಿ 2018ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿ ಸಿದ್ದ ಅಮೀನರಡ್ಡಿ ಯಾಳಗಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸದಿರುವುದು ಕಂಡು ಬಂದಿದೆ.

ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಜಂಟಿಯಾಗಿ
ಪ್ರಚಾರ ನಡೆಸಬೇಕಿತ್ತು. ಆದರೆ ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌
ನಡುವೆ ಒಮ್ಮತ ಕಂಡು ಬರುತ್ತಿಲ್ಲ. ಕಳೆದ ಸಲ ಮೊದಲ ಬಾರಿಗೆ
ವಿಧಾನಸಭೆಗೆ ಸ್ಪರ್ಧಿಸಿದ್ದ ಅಮೀನರಡ್ಡಿ ಯಾಳಗಿ 23ಸಾವಿರಕ್ಕೂ
ಅ ಧಿಕ ಮತ ಪಡೆದಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ
ಕಾರ್ಯಕರ್ತರ ಸಮಾವೇಶ ತಲಾ ಒಂದು ಬಾರಿ ನಡೆಸುವ
ಮೂಲಕ ಮತದಾರರನ್ನು ಸೆಳೆಯಲು ಯತ್ನಿಸಲಾಗಿದೆ. ಬಿಜೆಪಿ
ಪ್ರಬುದ್ಧರ ಸಭೆ ಆಯೋಜಿಸಿ ಬಿಜೆಪಿ ಪ್ರಮುಖ ಶ್ರೀಕಾಂತ ಕುಲಕರ್ಣಿ ಇತರರನ್ನು ಕರೆಯಿಸಿ ಮತಬೇಟೆ ನಡೆಸುವ ಕುರಿತು
ಚರ್ಚೆ ನಡೆಸಿದರೆ, ಕಾಂಗ್ರೆಸ್‌ ರಾಜ್ಯ ನಾಯಕ, ಅರಣ್ಯ ಖಾತೆ
ಸಚಿವ ಸತೀಶ ಜಾರಕಿಹೊಳೆ ಅವರನ್ನು ಕರೆಸಿ ಪ್ರಚಾರ ಸಭೆ
ನಡೆಸಿದೆ.

Advertisement

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಗ್ರಾಮೀಣ ಭಾಗದ ಜಿಪಂ ಕ್ಷೇತ್ರ ವ್ಯಾಪ್ತಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚಿಸಿದ್ದಾರೆ. ನಡೆಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಸಹ ಎಲ್ಲ ಜಿಪಂ ವ್ಯಾಪ್ತಿಯಲ್ಲಿ ಒಂದು ಸುತ್ತಿನ ಮತ ಯಾಚನೆ
ಮುಗಿಸಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಗ್ರಾಮೀಣ ಭಾಗದಲ್ಲೂ ದೇಶದ ಸುಭದ್ರತೆ, ಸರ್ಜಿಕಲ್‌ ಸ್ಟ್ರೈಕ್ , ಬಾಲಾಕೋಟ್‌ ದಾಳಿ ಸೇರಿದಂತೆ ಉಚಿತ
ಸಿಲಿಂಡರ್‌, ಆರೋಗ್ಯ ವಿಮೆ, ಆಯುಷ್ಮಾನ್‌ ಭಾರತ್‌, ವಿವಿಧ
ಯೋಜನೆಗಳ ಜಾರಿ ಕುರಿತು ಜನರು ಮಾತನಾಡುತ್ತಿದ್ದಾರೆ. ಇದೇ
ಮೊದಲ ಬಾರಿಗೆ ದೇಶ ಸುಭದ್ರತೆ ಕುರಿತು ಚರ್ಚೆ ಹಳ್ಳಿಹಳ್ಳಿಗಳಲ್ಲಿ
ನಡೆಯುತ್ತಿರುವುದು ಕಾಣಬಹುದು. ಅಲ್ಲದೆ ರಾಜ್ಯದಲ್ಲಿ
ಸಿದ್ರಾಮಯ್ಯನವರ ಆಡಳಿತಕ್ಕೆ ಮುಚ್ಚುಗೆ ವ್ಯಕ್ತವಾಗಿದೆ.
ಆದರೆ ಜನರು ಕೇಂದ್ರದಲ್ಲಿ ಗಟ್ಟಿ ಸರ್ಕಾರ ಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶರಣಬಸಪ್ಪಗೌಡ ದರ್ಶನಾಪುರ 30 ಸಾವಿರ ಅಂತರದಿಂದ ಗೆಲವು ಸಾಧಿಸಿದ್ದರು.

ಅದರಂತೆ ಲೋಕಸಭೆಯಲ್ಲೂ ಆ ಅಂತರ ಕಾಯ್ದುಕೊಳ್ಳಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ, ಲಂಬಾಣಿ, ಕುರಬರು, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಮತ ಹೆಚ್ಚಿವೆ. ಮತದಾರ ಯಾರ ಪರ ಒಲವು ತೋರಲಿದ್ದಾನೆ ಕಾಯ್ದು ನೋಡಬೇಕು.

ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಸುರಪುರ ಶಾಸಕ ರಾಜೂಗೌಡ, ದೇವದುರ್ಗ ಶಾಸಕ ಶಿವನಗೌಡ ನಾಯಕ ಸೇರಿದಂತೆ ಮಾಜಿ ಶಾಸಕ ಗುರು ಪಾಟೀಲ ಟೊಂಕ ಕಟ್ಟಿ ನಿಂತಿದ್ದಾರೆ. ಕ್ಷೇತ್ರದಲ್ಲಿ ಎರಡು ಪಕ್ಷಗಳ ನಾಯಕರ ಅಬ್ಬರದ ಪ್ರಚಾರ ನಡೆದಿದೆ. ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಇರುವುದರಿಂದ ಇಲ್ಲಿ ಜೆಡಿಎಸ್‌ ಅಭ್ಯರ್ಥಿ
ಇಲ್ಲ. ಆದರೆ ಕ್ಷೇತ್ರದಲ್ಲಿ 2018ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ
ವಿಧಾನಸಭೆಗೆ ಸ್ಪರ್ಧಿಸಿದ್ದ ಅಮೀನರಡ್ಡಿ ಯಾಳಗಿ ಕಾಂಗ್ರೆಸ್‌
ಅಭ್ಯರ್ಥಿ ಪರ ಪ್ರಚಾರ ನಡೆಸದಿರುವುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next