Advertisement

ಕ್ಯಾಂಟೀನ್‌ ಮಾಲೀಕನ ಮಗಳ ಸಾಧನೆ

01:08 PM Apr 18, 2019 | Naveen |

ರಾಯಚೂರು: ಚಿಕ್ಕ ಕ್ಯಾಂಟೀನ್‌ ಇಟ್ಟುಕೊಂಡು ಬದುಕಿನ ಬಂಡಿ ನಡೆಸುವವರ ಮಗಳು ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಶೇ.90.33 ಅಂಕ ಪಡೆಯುವ ಮೂಲಕ ಸಾಧನೆ
ಮಾಡಿದ್ದಾಳೆ.

Advertisement

ನಗರದ ಜಸ್ಟಿಸ್‌ ಶಿವರಾಜ ಪಾಟೀಲ ಕಾಲೇಜಿನ ವಿದ್ಯಾರ್ಥಿನಿ ಸಹನಾಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲೆ ಓದಿ ಪಿಯುಸಿ ವಿಜ್ಞಾನ ವಿಷಯದಲ್ಲಿ ಇಷ್ಟು ಅಂಕ ಪಡೆದಿರುವುದು ವಿಶೇಷ. ತಂದೆ ಸಿದ್ರಾಮಪ್ಪ, ತಾಯಿ ಕಲಾವತಿ ಚಿಕ್ಕ ಕ್ಯಾಂಟೀನ್‌ ಇಟ್ಟುಕೊಂಡು ಜೀವನ ನಡೆಸುತ್ತ ಮೂವರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ದೊಡ್ಡ ಮಗಳು ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಂಪ್ಯೂಟರ್ನಲ್ಲಿ ಇಂಜಿನಿಯರಿಂಗ್‌ ಮುಗಿಸಿದರೆ, ಎರಡನೇ ಮಗಳು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಇಂಜಿನಿಯರಿಂಗ್‌ ಪೂರ್ಣಗೊಳಿಸಿದ್ದಾರೆ. ಮೂರನೇ ಮಗಳು ಸಹನಾ ಈಗ ದ್ವಿತೀಯ ಪಿಯುನಲ್ಲಿ ಉತ್ತಮ ಅಂಕ ಪಡೆದಿದ್ದಾರೆ.

ಇಂಗ್ಲಿಷ್‌ನಲ್ಲಿ 90, ಹಿಂದಿಯಲ್ಲಿ 95, ರಸಾಯನ ಶಾಸ್ತ್ರದಲ್ಲಿ 93, ಭೌತಶಾಸ್ತ್ರ 91, ಗಣಿತದಲ್ಲಿ 95 ಹಾಗೂ ಜೈವಿಕ ಶಾಸ್ತ್ರದಲ್ಲಿ 88 ಅಂಕ ಪಡೆದಿದ್ದಾರೆ. ಪ್ರಾಥಮಿಕ, ಪ್ರೌಢಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಪಡೆದರೂ ಸಹನಾ, ಯಾವುದೇ ಟ್ಯೂಷನ್‌ಗೆ ಹೋಗದೆ ಇಷ್ಟು ಅಂಕ ಪಡೆದಿದ್ದಾರೆ. ಈಗಾಗಲೇ ಇಬ್ಬರು ಅಕ್ಕಂದಿರು ಐಎಎಸ್‌ ಸಿದ್ಧತೆಯಲ್ಲಿದ್ದರೆ, ಸಹನಾ ಕೂಡ ಅದೇ ಹಾದಿಯಲ್ಲಿದ್ದಾರೆ.ಅವರು ಕೂಡ ಮುಂದೆ ಐಎಎಸ್‌ ಅ ಧಿಕಾರಿ ಆಗಬೇಕು ಎಂಬ ಗುರಿ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ವಾಣಿಜ್ಯ ವಿಭಾಗದಲ್ಲಿ ಎಸ್‌ಆರ್‌ಪಿಎಸ್‌ ಪದವಿ ಪೂರ್ವ ಕಾಲೇಜಿನ ವನಿತಾ ಶೇ.96.66 ಅಂಕ ಪಡೆದು ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ 97, ಇಂಗ್ಲಿಷ್‌ನಲ್ಲಿ 87, ಬ್ಯುಸಿನೆಸ್‌ ಸ್ಟಡೀಸ್‌ನಲ್ಲಿ 98, ಸಾಂಖ್ಯಿಕ ಶಾಸ್ತ್ರದಲ್ಲಿ 98 ಹಾಗೂ ಅಕೌಂಟೆನ್ಸಿ ಮತ್ತು ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಸಿಂಧನೂರಿನ ಸಂಕೇತ ಸ್ವತಂತ್ರ ಪದವಿ
ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ ಹಳ್ಳಪ್ಪ ಹಡಪದ
578 (ಶೇ.96.33) ಅಂಕ ಪಡೆದು ಸಾಧನೆ ಮಾಡಿದ್ದಾಳೆ.

Advertisement

ನಿತ್ಯ ಮನೆಯಲ್ಲಿಯೇ ರಾತ್ರಿ 12ರಿಂದ 1 ಗಂಟೆವರೆಗೂ
ಓದುತ್ತಿದ್ದೆ. ಅಕ್ಕಂದಿರ ಮಾರ್ಗದರ್ಶನವೇ ನನಗೆ ಉತ್ತಮ ಅಂಕ ಗಳಿಕೆಗೆ ಪ್ರೇರಣೆ ಆಯಿತು. ಮುಂದೆ ಐಎಎಸ್‌ ಮಾಡಬೇಕೆಂಬ ಗುರಿ ಇದೆ.
. ಸಹನಾ ಸಿದ್ರಾಮಪ್ಪ,
ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next