Advertisement

ಮೋದಿ ಮೋಡಿಗೆ ಮರುಳಾಗದಿರಿ

03:43 PM Apr 06, 2019 | |

ಲಿಂಗಸುಗೂರು: ದೃಶ್ಯ ಮಾಧ್ಯಮ, ಐಟಿ, ಸಿಬಿಐ ದುರುಪಯೋಗ ಪಡಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯ ಆಡಳಿತ ಹಿಟ್ಲರ್‌ ಆಡಳಿತ ಇದ್ದಂತೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಪಟ್ಟಣದ ಗಡಿಯಾರ ವೃತ್ತದಲ್ಲಿ ಶುಕ್ರವಾರ ರಾಯಚೂರು
ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕರ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ನೂರೆಂಟು ಸುಳ್ಳು ಹೇಳಿ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಏನು ಕೆಲಸ ಮಾಡದೇ ಬರೀ ಸುಳ್ಳು ಹೇಳುತ್ತಲೇ ಐದು ವರ್ಷ ಕಳೆದಿದ್ದಾರೆ. ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಏನು ಅಭಿವೃದ್ಧಿ ಕೆಲಸಗಳು ಆಗಿಲ್ಲವೆಂದು ಹೇಳುತ್ತಿದ್ದಾರೆ. ಹಾಗಾದರೇ
ವಿದೇಶಕ್ಕೆ ಸುತ್ತಾಡಲು ಬಳಸುವ ವಿಮಾನಗಳು ನಿನ್ನೆ ಮೊನ್ನೆ ಮಾಡಲಾಗಿತ್ತಾ..? ಮೋದಿಯವರು ಇತ್ತೀಚೆಗೆ ತಮ್ಮ ಭಾಷಣದಲ್ಲಿ 37 ವಿಮಾನ ನಿಲ್ದಾಣ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಅಂಕಿ ಅಂಶ ಪ್ರಕಾರ ಬರೀ ಕೇವಲ ಆರು ವಿಮಾನ ನಿಲ್ದಾಣ ಮಾಡಿದ್ದಾರೆ. ಆದರೆ ಬರೀ ಸುಳ್ಳು ಹೇಳುವುದು ಗೊತ್ತು. ಅವರಿಗೆ ಕೆಲಸ ಮಾಡುವುದು ಗೊತ್ತಿಲ್ಲ. ಕಾಂಗ್ರೆಸ್‌ ಆಡಳಿತದಲ್ಲಿ ದೇಶಕ್ಕೆ
ಅನೇಕ ಕೊಡುಗೆಗಳನ್ನು ನೀಡಿದೆ. ಆದರೆ ಇದನ್ನೆಲ್ಲಾ ಮರೆಮಾಚಿ ಯುವಕರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಚುನಾವಣೆ ಮುಗಿಯುವವರಿಗೆ ಯುವಕರು ಟಿವಿ ನೋಡಬಾರದು. ಇಲ್ಲದಿದ್ದರೆ ಮೋದಿ ಮಂಕು ಮೋಡಿಯಿಂದ ಯುವಕರಿಗೆ ಹುಚ್ಚು ಹಿಡಿಸುತ್ತಾರೆ ಎಂದರು. ಕಳೆದ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅನ್ನಭಾಗ್ಯ, ನೀರಾವರಿಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡಲಾಗಿತ್ತು. ಈಗ ಎಚ್‌.ಡಿ. ಕುಮಾರಸ್ವಾಮಿ 17 ಸಾವಿರ ಕೋಟಿ ರೂ. ನೀಡಿದ್ದಾರೆ. ಮೈತ್ರಿ ಸರ್ಕಾರದ ಜನಪರ, ಅಭಿವೃದ್ಧಿ ಪರ ಚಿಂತನೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿ ಕಾಣಬೇಕಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹೀಗಾಗಿ ಮೈತ್ರಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.

ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ ಮಾತನಾಡಿ, ದೇಶದಲ್ಲಿ ಸಾಕ್ಷರತೆ ಶೇ.8 ರಷ್ಟು ಇತ್ತು. ಆದರೆ ಈಗ 80 ರಷ್ಟು ಆಗಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅನೇಕ ವಿಶ್ವವಿದ್ಯಾಲಯ, ಶಾಲಾ-ಕಾಲೇಜು ಸ್ಥಾಪಿಸಿದ್ದರಿಂದ ಆಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜನರಿಗೆ ನೀಡಿದ್ದ 165 ಭರವಸೆ
ಈಡೇರಿಸಿದ್ದಾರೆ ಎಂದರು.

ಮೈತ್ರಿ ಪಕ್ಷದ ಅಭ್ಯರ್ಥಿ ಬಿ.ವಿ.ನಾಯಕ, ಶಾಸಕರಾದ ಡಿ.ಎಸ್‌.ಹೂಲಗೇರಿ, ಪ್ರತಾಪಗೌಡ ಪಾಟೀಲ, ಎಂಎಲ್ಸಿ ಎನ್‌.ಎಸ್‌. ಬೋಸರಾಜ್‌, ಬಸವರಾಜ ಪಾಟೀಲ ಇಟಗಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಹಸನಸಾಬ ದೋಟಿಹಾಳ, ಜೆಡಿಎಸ್‌ ಮುಖಂಡ ಸಿದ್ದು ಬಂಡಿ, ಮುಖಂಡರಾದ ಅಮರಗುಂಡಪ್ಪ ಮೇಟಿ, ಶರಣಪ್ಪ
ಮೇಟಿ, ಶರಣಗೌಡ ಬಯ್ನಾಪುರ, ಮಹಿಳಾ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಭಾರತಿ ನಿಲಗೇರಿ, ಪಾಮಯ್ಯ ಮುರಾರಿ, ಎಚ್‌.ಬಿ.ಮುರಾರಿ, ಬಸವಂತರಾಯ ಕುರಿ, ಭೂಪನಗೌಡ ಕರಡಕಲ್‌, ದಾವೂದ ಮುದಗಲ್‌ ಸೇರಿದಂತೆ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next