Advertisement

ಪ್ರವಾಹದ ಹೊಡೆತಕ್ಕೆ ಮಕಾಡೆ ಮಲಗಿದ ಬೆಳೆ

02:47 PM Aug 15, 2021 | Team Udayavani |

ದೇವದುರ್ಗ: ನಾರಾಯಣಪುರ ಜಲಾಶಯದಿಂದಕೃಷ್ಣಾನದಿಗೆ 4.17 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ 30ಕ್ಕೂ ಅ ಧಿಕಗ್ರಾಮಗಳಲ್ಲಿ ಬೆಳೆದಿದ್ದ 1280.5 ಹೆಕ್ಟೇರ್‌ ಭತ್ತ, 876.5ಹೆಕ್ಟೇರ್‌ ಹತ್ತಿ, 154 ಹೆಕ್ಟೇರ್‌ ತೊಗರಿ, 34.5 ಹೆಕ್ಟೇರ್‌ಸಜ್ಜೆ, 5 ಹೆಕ್ಟೇರ್‌ ಸೂರ್ಯಕಾಂತಿ, 2 ಹೆಕ್ಟೇರ್‌ ಎಳ್ಳು ಸೇರಿಒಟ್ಟು 2352.5 ಹೆಕ್ಟೇರ್‌ ಹಾನಿಯಾಗಿದೆ.

Advertisement

ಯಾವ ಹಳ್ಳಿಗಳಲ್ಲಿ ನಷ್ಟ?: ಕೃಷ್ಣಾ ನದಿ ಪ್ರವಾಹಕ್ಕೆಕೊಪ್ಪರು, ಕುರ್ಕಿಹಳ್ಳಿ, ಪರ್ತಾಪುರು, ಯಾಟಗಲ್‌,ಅರಿಷಣಿಗಿ, ಹೂನ್ನೂರು, ಹೇರೂರು, ಅಂಜಳ,ಅಂಚೆಸುಗೂರು, ಗೋಪಾಳಪುರು, ನಿಲವಂಜಿ,ಹಿರೇರಾಯಕುಂಪಿ, ಮದರಕಲ್‌, ಹೇರುಂಡಿ,ಬಾಗೂರು, ಚಿಂಚೋಡಿ, ವೀರಗೋಟ, ಲಿಂಗದಹಳ್ಳಿ,ಅಪ್ರಾಳ, ಬಸವಂತಪೂರು, ಗಲಗ ಸೇರಿದಂತೆ ಇತರೆನದಿ ತೀರದ ಗ್ರಾಮಗಳಲ್ಲಿ ಬೆಳೆದ ಬೆಳೆ ನಷ್ಟವಾಗಿದೆ.

ಜೆಸ್ಕಾಂಗೂ ಲಕ್ಷಾಂತರ ನಷ್ಟ: ಕೃಷ್ಣಾ ನದಿ ತೀರದಕಂಬಗಳು ಬಿದ್ದಿವೆ. ವಿದ್ಯುತ್‌ ಪರಿವರ್ತಕಗಳಿಗೆ ನೀರುನುಗ್ಗಿದೆ. ಇದರಿಂದ ಮೂರು ಟಿಸಿಗಳಿಗೂ ಹೆಚ್ಚುಹಾನಿಯಾಗಿವೆ. 12ಕ್ಕೂ ಅಧಿ ಕ ವಿದ್ಯುತ್‌ ಕಂಬಗಳುನೆಲಕ್ಕುರುಳಿವೆ.
ಪರಿಹಾರ ಘೋಷಣೆ: ಕಂದಾಯ-ಕೃಷಿ ಅಧಿ ಕಾರಿಗಳುಜಂಟಿ ಸಮೀಕ್ಷೆ ನಡೆಸಿದ್ದು,ಎನ್‌ಡಿಆರ್‌ಎಫ್‌ಮಾರ್ಗಸೂಚಿಯಂತೆ ಮಳೆಯಾಶ್ರಿತ ಪ್ರದೇಶದಲ್ಲಿ ಪತ್ರಿಹೆಕ್ಟೇರ್‌ಗೆ 6,800 ರೂ. ಪರಿಹಾರ ನಿಗದಿಪಡಿಸಲಾಗಿದೆ.ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ 13,500 ರೂ.ಪರಿಹಾರ ಘೋಷಿಸಲಾಗಿದೆ.

ವಿಳಂಬ ಬೇಡ: ಕೊರೊನಾ ಆರ್ಥಿಕ ಸಂಕಷ್ಟದಮಧ್ಯೆ ಹೈರಾಣಾದ ರೈತರಿಗೆ ಇದೀಗ ಬೆಳೆ ನಷ್ಟ ಜೀವಹಿಂಡಿದೆ. ಬೆಳೆನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿಗೆ ಅಲೆಯುವುದನ್ನು ಜಿಲ್ಲಾಡಳಿತಮತ್ತು ತಾಲೂಕಾಡಳಿತ ತಪ್ಪಿಸಬೇಕಿದೆ.
ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next