ರಾಯಬಾಗ: ರೈತರ ಮತ್ತು ವರ್ತಕರ ನಡುವಿನ ಸೇತುವೆಯಾಗಿದ್ದ ಎಪಿಎಂಸಿಗಳು ಇಂದು ಸರಕಾರ ಜಾರಿಗೆ ತರುತ್ತಿರುವ ಹೊಸ ಕಾಯ್ದೆಯಿಂದ ಮುಚ್ಚುವ ಪರಿಸ್ಥಿತಿ ನಿರ್ಮಾಣಗೊಂಡಿವೆ. ಮುಂದೊಂದು ದಿನ ಎಪಿಎಂಸಿಗಳು ದಾಖಲೆಗಳಲ್ಲಿ ಮಾತ್ರ ಕಾಣುವಂತೆ ಆಗಲು ಸರಕಾರವೇ ಕಾರಣವಾಗಿರುವುದು ಮಾತ್ರ ವಿಪರ್ಯಾಸ.
ತಾಲೂಕು ಕೇಂದ್ರದಲ್ಲಿ ಸ್ಥಾಪನೆಯಾಗಬೇಕಿದ್ದ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸ್ಥಳದ ಅಭಾವದಿಂದ ಕುಡಚಿಯಲ್ಲಿ 1961 ರಲ್ಲಿ 6 ಎಕರೆಯಲ್ಲಿ ಸ್ಥಾಪಿಸಲಾಗಿದೆ. ಅಂದಿನ ದಿನಗಳಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ವರ್ತಕರು ಹತ್ತಿ ಖರೀದಿಸಲುಕುಡಚಿ ಎಪಿಎಂಸಿಗೆ ಬರುತ್ತಿದ್ದರು. ಜತೆಗೆ ಶೇಂಗಾ,ಜೋಳ, ಗೋಧಿ, ಗೋವಿನ ಜೋಳ ಬೆಳೆಗಳನ್ನು ಮಾರಾಟ ಮಾಡಲು ರೈತರು ಎಪಿಎಂಸಿಗೆ ಬರುತ್ತಿದ್ದರಿಂದ ವ್ಯಾಪಾರ, ವಹಿವಾಟು ಚೆನ್ನಾಗಿ ನಡೆದು, ಎಪಿಎಂಸಿಗೆ ಆದಾಯ ಬರುತ್ತಿತ್ತು. ಆದರೆ 1979-80ರ ನಂತರ ಈ ಭಾಗದಲ್ಲಿ ರೈತರು ಹೆಚ್ಚು ಕಬ್ಬು ಬೆಳೆಯಲು ಪ್ರಾರಂಭಿಸಿದ್ದರಿಂದ ದಿನೇ ದಿನೇ ಎಪಿಎಂಸಿಗೆಬರುವ ಆದಾಯ ಕಡಿಮೆಯಾಗತೊಡಗಿತು. ಎಪಿಎಂಸಿಯವರ ಅನುಮತಿಯಿಲ್ಲದೇನೇರವಾಗಿ ವರ್ತಕರಿಗೆ ಮಾರಾಟ ಮಾಡಲುಅವಕಾಶ ಇಲ್ಲದ್ದರಿಂದ ಎಪಿಎಂಸಿಗೆ ಸೆಸ್ ಮೂಲಕ ಆದಾಯ ಬರುತ್ತಿತ್ತು. ಆದರೆ ಸರಕಾರದ ಹೊಸ ಕಾಯ್ದೆಯಿಂದ ಎಪಿಎಂಸಿಗೆ ಬರುವ ಆದಾಯ ಕಡಿಮೆಯಾಗುತ್ತಿದೆ ಎಂದು ಅ ಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮೊದಲು ಎಪಿಎಂಸಿಗೆಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿಗೆ ಅವಕಾಶ ಮಾಡಿಕೊಟ್ಟು ಅದರಿಂದ ಸೆಸ್‌ಸಂಗ್ರಹಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ನಂತರ ಎಪಿಎಂಸಿಗೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ಸೆಸ್ ಸಂಗ್ರಹಿಸುವ ಮತ್ತು ಕೇಸ್ ಹಾಕುವ ಅವಕಾಶ ಇಲ್ಲ. ಇದು ಎಪಿಎಂಸಿ ಆದಾಯದಲ್ಲಿ ಇಳಿಕೆಯಾಗಲುಕಾರಣವಾಗಿದೆ ಎಂದು ಸಿಬ್ಬಂದಿ ಹೇಳುತ್ತಾರೆ. 2019-20 ನೇ ಸಾಲಿನಲ್ಲಿ ಸುಮಾರು 54 ಲಕ್ಷ 98 ಸಾವಿರ ರೂ. ದಷ್ಟು ಆದಾಯ ಎಪಿಎಂಸಿಗೆ ಬಂದಿತ್ತು. 2020ರ ಏಪ್ರಿಲ್‌ದಿಂದ ಜನವರಿ ಅಂತ್ಯದವರೆಗೆ ಕೇವಲ 5 ಲಕ್ಷ ರೂ. ದಷ್ಟು ಮಾತ್ರಆದಾಯ ಬಂದಿದೆ. ಕೊರೊನಾ, ಅತಿವೃಷ್ಟಿ ಮತ್ತು ಹೊಸ ಕಾಯ್ದೆಯಿಂದಾಗಿ ಎಪಿಎಂಸಿ ಆದಾಯ ಕಡಿಮೆ ಆಗಲು ಇನ್ನೊಂದು ಕಾರಣವಾಗಿದೆ. ಕುಡಚಿ ಎಪಿಎಂಸಿಯಲ್ಲಿ ಎರಡು ಚಿಕ್ಕ ಮಳಿಗೆಗಳಿದ್ದು, ಅವು ಖಾಲಿ ಇರುವುದರಿಂದ ಯಾವುದೇ ಆದಾಯವಿರುವುದಿಲ್ಲ. ಇನ್ನು ಮೂರು ಗೋದಾಮುಗಳಿದ್ದು, ಅವುಗಳನ್ನು ಆಹಾರ ಮತ್ತುಸರಬರಾಜು ಇಲಾಖೆಗೆ ನೀಡಿದ್ದರಿಂದ ಇವುಗಳಿಂದಬರುವ ಆದಾಯ ಮೇಲೆ ಎಪಿಎಂಸಿ ಖರ್ಚು ನಿಭಾಯಿಸುವಂತಾಗಿದೆ.
ಅವರಿಂದ ಸುಮಾರು 12 ಲಕ್ಷ ರೂ. ಬಾಕಿ ಬರಬೇಕಾಗಿದೆ ಎಂದು ಅಕೌಂಟೆಂಟ್ ಸಿಬ್ಬಂದಿ ಹೇಳುತ್ತಾರೆ. ಇದಲ್ಲದೇಎರಡು ಎಪಿಎಂಸಿ ಪ್ರಾಂಗಣ ನಿರ್ಮಿಸಿದ್ದು, ಇವುಗಳ ಬಳಕೆ ಮಾಡಿಕೊಳ್ಳಬೇಕಾಗಿದೆ. ಎಪಿಎಂಸಿ ಆವರಣದಲ್ಲಿರುವ ಎರಡು ಗೋದಾ ಮಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನು ಕಚೇರಿ ಕೂಡ ಬೀಳುವ ಸ್ಥಿತಿಯಲ್ಲಿದ್ದು, ಅದರಲ್ಲಿಯೇಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಿದೆ.
ಸಿಬ್ಬಂದಿ ಕೊರತೆ: ಕುಡಚಿ ಎಪಿಎಂಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಇದ್ದು, ಎಪಿಎಂಸಿಯಲ್ಲಿ 8 ಜನ ಸಿಬ್ಬಂದಿಯಲ್ಲಿ ಕೇವಲ ಕಾರ್ಯದರ್ಶಿ ಮತ್ತು ಅಕೌಂಟೆಂಟ್‌ಇಬ್ಬರು ಮಾತ್ರ ಕಾಯಂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಇಬ್ಬರು ಡೆಪ್ಟೆàಷನ್ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನುಳಿದಕಂಪ್ಯೂಟರ್ ಮತ್ತು ಸೆಕ್ಯೂರಿಟಿ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.
ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗೆ ಬರುವ ಆದಾಯ ಕುಂಠಿತಗೊಳ್ಳಲಿದೆ. ಮುಂದೊಂದುದಿನ ಎಪಿಎಂಸಿಗಳ ಬಾಗಿಲು ಮುಚ್ಚಿದರೆ ಅಚ್ಚರಿಯೇನಿಲ್ಲ.
-ಮಲ್ಲಪ್ಪ ಮೇತ್ರಿ, ಮಾಜಿ ಅಧ್ಯಕ್ಷರು, ಎಪಿಎಂಸಿ ಕುಡಚಿ
ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರ ಹಕ್ಕನ್ನು ಸರಕಾರ ಕಸಿದುಕೊಂಡಿದೆ. ವರ್ತಕರುಕೇಳಿದ ಬೆಲೆಗೆ ರೈತರು ಬೆಳೆದ ಬೆಳೆ ನೀಡುವಂತಾಗಿದೆ. ಸರಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ನೀಡುವಂತೆ ಕೇಳಲು ಅಧಿಕಾರ ಇಲ್ಲದಂತಾಗಿದೆ.
– ಮಲ್ಲಪ್ಪ ಅಂಗಡಿ, ರೈತ ಸಂಘ ತಾಲೂಕು ಅಧ್ಯಕ್ಷ, ರಾಯಬಾಗ
-ಸಂಭಾಜಿ ಚವ್ಹಾಣ