Advertisement

ಬಸವೇಶ್ವರ ವೃತ್ತದಲ್ಲಿ ರಾವತ್‌ ಹಾಗೂ ಮಂಟೂರ ಅವರಿಗೆ ಶ್ರದ್ಧಾಂಜಲಿ

04:33 PM Dec 11, 2021 | Shwetha M |

ಬಸವನಬಾಗೇವಾಡಿ: ಕನ್ನಡ ನಾಡು ಕಂಡ ಶ್ರೇಷ್ಠ ಪ್ರವಚನಕಾರ ಡಾ| ಈಶ್ವರ ಮಂಟೂರ ಲಿಂಗೈಕ್ಯ ಹಾಗೂ ಸೇನಾಧಿಪತಿ ಜನರಲ್‌ ಬಿ.ಪಿ. ರಾವತ್‌ ನಿಧನಕ್ಕೆ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಹಾಗೂ ಬಸವ ಸೈನ್ಯ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪ್ರತ್ಯೇಕವಾಗಿ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಬಸವೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸಿದ್ದಲಿಂಗ ಶ್ರೀಗಳು ಮಾತನಾಡಿ, ಪ್ರವಚನಕಾರ ಡಾ| ಈಶ್ವರ ಮಂಟೂರ ಅವರು ಬಸವಣ್ಣನವರ ವಚನಗಳನ್ನು ದೇಶ ವಿದೇಶದಲ್ಲಿ ಬಿತ್ತರಿಸುವ ಕಾಯಕದಲ್ಲಿ ತೊಡಗಿದ್ದರು. ಅವರ ನಿಧನದಿಂದ ಲಿಂಗಾಯತ ಧರ್ಮಕ್ಕೆ ನಷ್ಟವಾಗಿದೆ ಎಂದು ಹೇಳಿದರು. ಸೇನಾಧಿಪತಿ ಜನರಲ್‌ ಬಿ.ಪಿ. ರಾವತ್‌ ನಿಧನದಿಂದ ಭಾರತ ದೇಶ ಬಡವಾಗಿದೆ. ದೇಶ ರಕ್ಷಣೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವಕರಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸದಲ್ಲಿ ತೊಡಗಿದ್ದ ರಾವತ್‌ ನಿಧನದಿಂದ ಭಾರತ ದೇಶಕ್ಕೆ ನಷ್ಟವಾಗಿದೆ ಎಂದು ಹೇಳಿದರು.

ಹಿರೇಮಠ ಶಿವಪ್ರಕಾಶ ಶ್ರೀಗಳು, ಮನಗೂಳಿ ಸಂಗನಬಸವ ಶ್ರೀಗಳು, ಯರನಾಳದ ಸಗನಬಸವ ಶ್ರೀಗಳು, ಕರಭಂಟನಾಳದ ಶಿವಕುಮಾರ ಶ್ರೀಗಳು, ಶಾಸಕ ಶಿವಾನಂದ ಪಾಟೀಲ, ಮಾಜಿ ಶಾಸಕ ಎಸ್‌.ಕೆ. ಬೆಳ್ಳುಬ್ಬಿ ಈರಣ್ಣ ಪಟ್ಟಣಶೆಟ್ಟಿ, ಶಂಕರಗೌಡ ಬಿರಾದಾರ, ವಿನೂತ್‌ ಕಲ್ಲೂರ, ರವಿ ರಾಠೊಡ, ಸಂಗಮೇಶ ಜಾಲಗೇರಿ, ಪ್ರಭಾಕರ ಖೇಡದ, ವಿವೇಕಾನಂದ ಕಲ್ಯಾಣಶೆಟ್ಟಿ, ಸಂಗಮೇಶ ಓಲೇಕಾರ, ಶ್ರೀಕಾಂತ ಪಡಶೆಟ್ಟಿ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next