Advertisement

ಬರಲಿದೆ ರವಿಶಾಸ್ತ್ರಿ ಕ್ರಿಕೆಟ್‌ ಕಥನ

01:07 AM Jan 11, 2021 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದ ಕೋಚ್‌, ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ತಮ್ಮ ಕ್ರಿಕೆಟ್‌ ಬದುಕನ್ನು ಪುಸ್ತಕ ರೂಪದಲ್ಲಿ ಹೊರತರಲು ನಿರ್ಧರಿಸಿದ್ದಾರೆ. ಇದೇ ಬೇಸಗೆಯಲ್ಲಿ ಇದು ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Advertisement

ಕ್ರೀಡಾ ಪತ್ರಕರ್ತ ಅಯಾಜ್‌ ಮೆಮನ್‌ ಮತ್ತು ರವಿಶಾಸ್ತ್ರಿ ಸೇರಿಕೊಂಡು ಈ ಪುಸ್ತಕವನ್ನು ಬರೆಯ ಲಿದ್ದಾರೆ ಎಂದು “ಹಾರ್ಪರ್‌ ಕಾಲಿನ್ಸ್‌ ಇಂಡಿಯಾ’ ರವಿವಾರ ತಿಳಿಸಿದೆ.

ಇದನ್ನು ರವಿವಾರವೇ ಮಾಧ್ಯಮ ಗಳಿಗೆ ತಿಳಿಸಲು ವಿಶೇಷ ಕಾರಣವಿದೆ. 36 ವರ್ಷಗಳ ಹಿಂದೆ ಇದೇ ದಿನ ಮುಂಬಯಿ ಪರ ರಣಜಿ ಆಡುತ್ತಿದ್ದ ರವಿಶಾಸ್ತ್ರಿ, ಬರೋಡಾ ವಿರುದ್ಧ ತಿಲಕ್‌ರಾಜ್‌ ಅವರ ಓವರ್‌ ಒಂದರಲ್ಲಿ 6 ಸಿಕ್ಸರ್‌ ಸಿಡಿಸಿ ಸುದ್ದಿಯಾಗಿದ್ದರು.

4 ದಶಕಗಳ ಹಿಂದೆ ರವಿಶಾಸ್ತ್ರಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆರಂಭಿಸಿ ದ್ದರು. ಅವರು ಗಾವಸ್ಕರ್‌, ರಿಚರ್ಡ್ಸ್‌, ಬೋಥಂ, ಇಮ್ರಾನ್‌, ಹ್ಯಾಡ್ಲಿ, ತೆಂಡುಲ್ಕರ್‌ ಮೊದಲಾದ ಖ್ಯಾತನಾಮ ಕ್ರಿಕೆಟಿಗರ ಸಮ ಕಾಲೀನರೆಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next