ವಿದ್ಯಾನಗರ:ಸಮಾಜದ ಹಿತರಕ್ಷಣೆ ಯಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರಲ್ಲಿ ನಮ್ಮ ರವೀಂದ್ರ ಮಾಸ್ಟರ್ ಅವರೂ ಒಬ್ಬರು. ತನ್ನ ನಿಸ್ವಾರ್ಥ ಸೇವೆ ಹಾಗೂ ಸಮಾಜದೆಡೆಗಿನ ಕಳಕಳಿ ಅವರ ಪ್ರತಿಯೊಂದು ಚಟುವಟಿಕೆಗಳಲ್ಲಿ ಎದ್ದು ಕಾಣುತ್ತಿತ್ತು. ಜೀವನದುದ್ದಕ್ಕೂ ಶಿಕ್ಷಕನಾಗಿ, ಉತ್ತಮ ಮಾರ್ಗದರ್ಶಕರಾಗಿ, ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ದುಡಿದ ಮಾಸ್ಟರರ ಬದುಕು ನಮಗೆ ಆದರ್ಶ. ಎಂದು ಬದಿಯಡ್ಕ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ಸಂತಾಪ ವ್ಯಕ್ತಪಡಿಸಿದರು. ಮಾನ್ಯಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಅಗಲಿದ ಎಂ.ಎ.ರವೀಂದ್ರ ಮಾಸ್ಟರ್ ಮಾನ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರಾಜಕೀಯ, ಧಾರ್ಮಿಕಮುಂದಾಳು
ಬದಿಯಡ್ಕ ಪಂಚಾಯತ್‌ನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಸಮಗ್ರತೆಯನ್ನು ಕಟ್ಟಲು ವಿದ್ಯಾಭ್ಯಾಸದ ಅಗತ್ಯವಿದೆ ಎಂದು ಮನಗಂಡು ಅಕ್ಷರಜ್ಯೋತಿ ಪದ್ಧತಿಗೆ ರೂಪು ನೀಡಿದರು. ಇಂದೂ ಕೇರಳ ಸರಕಾರದ ಅಕ್ಷರಜ್ಯೋತಿ ಪದ್ಧತಿಯು ಮಾಸ್ಟರರು ಸಿದ್ಧಪಡಿಸಿದ ರೀತಿಯಲ್ಲೇ ಮುಂದುವರಿಯುತ್ತಿದೆ. ಎಂದು ಭಟ್ ತಿಳಸಿದರು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ರವೀಂದ್ರ ಮಾಸ್ಟರರು ಪಾರ್ಥಿಸುಬ್ಬ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷರಾಗಿದ್ದ ಇವರು ಕಾಂಗ್ರೆಸ್ ಪಕ್ಷದ ಬದಿಯಡ್ಕ ಮಂಡಲದ ಅಧ್ಯಕ್ಷರೂ ಆಗಿದ್ದರು. ಬಲ್ಲಿ ಯಾದವ ಸಮುದಾಯವನ್ನು ಒಬಿಸಿ ವಿಭಾಗವನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯದ ರಾಜಧಾನಿಗೂ ತೆರಳಿದ್ದಲ್ಲದೆ ಅದರಲ್ಲಿ ಯಶಸ್ವಿಯಾಗಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಗೋವಿಂದನ್ ನಂಬೂದಿರಿ ಅಧ್ಯಕ್ಷತೆವಹಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ನೀಲಕಂಠನ್ ನಾಯರ್, ಐಯುಎಮ್‌ಎಲ್‌ನ ಅನ್ವರ್ ಓಝೋನ್, ಬಿಜೆಪಿಯ ಶಂಕರ.ಡಿ, ಸಿಪಿಎಂನ ರಾಧಾಕೃಷ್ಣ ರೈ ಕಾರ್ಮಾರ್, ಜೆಡಿಯುವಿನ ಎಂ.ಎಂ.ಜನಾರ್ಧನ, ನಿವೃತ್ತ ಪ್ರಾಂಶುಪಾಲರಾದ ಶ್ರೀನಾಥ್.ಎ, ಐಎನ್‌ಸಿಯ ಖಾದರ್ ಮಾನ್ಯ, ಉದ್ಯಮಿ ಅಬ್ದುಲ್ ಖಾದರ್ ಹಾಜಿ, ಹಿರಿಯರಾದ ಎಸ್.ಗೋಪಾಲ, ಮಾನ್ಯ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾದ ಮಧುಚಂದ್ರ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಮಾನ್ಯ, ಯಕ್ಷಮಿತ್ರರು ಮಾನ್ಯ ಇದರ ಅಧ್ಯಕ್ಷರಾದ ಸುಂದರ ಶೆಟ್ಟಿ ಕೊಲ್ಲಂಗಾನ, ನಿವೃತ್ತ ವಿಎಒ ನಾರಾಯಣ ಮಣಿಯಾಣಿ, ನಿವೃತ್ತ ಮುಖ್ಯೋಪಾಧ್ಯಾಯರಾದ ನವೀನ್ ಮಾಸ್ತರ್, ಕಾರ್ಮಾರು ದೇವಸ್ಥಾನದ ಮೇನೇಜಿಂಗ್ ಟ್ರಸ್ಟ್ ನರಸಿಂಹ ಭಟ್, ಅಧ್ಯಕ್ಷರಾದ ಶ್ರೀಕೃಷ್ಣ ಭಟ್, ವಿಷ್ಣುಮೂರ್ತಿ ಸೇವಾಸಮಿತಿ ಕಾರ್ಮಾರ್ ಕಾರ್ಯದರ್ಶಿ ಅಶೋಕ್ ಕುಮಾರ್ ಎಂ.ಎನ್, ಸಾಮ್ರಾಟ್ ನ್ಪೋರ್ಟ್ಸ್ ಕ್ಲಬ್ ಮಾನ್ಯ, ಪ್ರಿಯದರ್ಶಿನಿ ಆರ್ಟ್ಸ್ ಆಂಡ್ ನ್ಪೋರ್ಟ್ಸ್ ಕ್ಲಬ್ ಮೇಗಿನಡ್ಕ, ಫ್ರೆಂಡ್ಸ್ ಮಾನ್ಯ, ಮಂಜುಶ್ರೀ ಯುವಕ ವೃಂದ ಕಾರ್ಮಾರ್, ಭಜರಂಗಬಲಿ ಕಾರ್ಮಾರ್, ಮುಕಾಂಬಿಕಾ ಆರ್ಟ್ಸ್ ಆಂಡ್ ನ್ಪೋರ್ಟ್ಸ್ ಕ್ಲಬ್ ಮುಂಡೋಡು, ಯಕ್ಷಮಿತ್ರರು ಮಾನ್ಯ, ಶಕ್ತಿ ಫ್ರೆಂಡ್ಸ್ ಶಕ್ತಿನಗರ, ಬ್ರದರ್ಸ್ ಕ್ಲಬ್ ಮಾನ್ಯ, ವಯನಾಟು ಕುಲವನ್ ಸೇವಾ ಸಮಿತಿ ಮಾನ್ಯ, ರಕ್ತೇಶ್ವರಿ ಮತ್ತು ಪರಿವಾರ ಸೇವಾ ಸಮಿತಿ ದೇವರಕೆರೆ ಮೇಗಿನಡ್ಕ ಇದರ ಪದಾ—ಕಾರಿಗಳು ಶ್ರದ್ಧಾಂಜಲಿ ಸಮರ್ಪಿಸಿದರು. ಬದಿಯಡ್ಕ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ಯಾಮ ಪ್ರಸಾದ್ ಮಾನ್ಯ ಸ್ವಾಗತಿಸಿ ಮಂಜುನಾಥ.ಡಿ ಮಾನ್ಯ ವಂದಿಸಿದರು.
ಸಂಬಳವೂ ಬಡವರ ಏಳಿಗೆಗಾಗಿ
5ವರ್ಷಗಳ ಕಾಲ ಬದಿಯಡ್ಕ ಪಂಚಾಯತು ಉಪಾಧ್ಯಕ್ಷರಾಗಿದ್ದ ರವೀಂದ್ರ ಮಾಸ್ಟರ್‌ಅವರು ತನಗೆ ಬರುವ ಗೌರವ ಧನವನ್ನು ಬಡವರಿಗಾಗಿ ವಿನಿಯೋಗಿಸಿ ಅವರ ಕಷ್ಟಕ್ಕೆ ನೋವಿಗೆ ನೆರವಾಗುತ್ತಿದ್ದರು. ಹಿಂದುಳಿದ ಬಡ ಜನರ ಅಭಿವೃದ್ಧಿಗಾಗಿ ಪ್ರಯತ್ನ ಮಾಡುತ್ತಿದ್ದ ಮಾಸ್ತರರು ಪಂಚಾಯತಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಅಗಣಿತ.