Advertisement

ಜಡೇಜ ದಂಪತಿ ಇದ್ದ ಕಾರು ಅಪಘಾತ; ಪತಿ –ಪತ್ನಿ ಪಾರು

07:37 PM Jan 28, 2017 | udayavani editorial |

ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ತಂಡದ ಸವ್ಯಸಾಚಿ ರವೀಂದ್ರ ಜಡೇಜ ಮತ್ತು  ಅವರ ಪತ್ನಿ ರೀವಾ ಸೋಳಂಕಿ ಇದ್ದ ಕಾರು ಜಾಮ್‌ ನಗರದಲ್ಲಿ ಅವಘಡಕ್ಕೆ ಗುರಿಯಾಗಿದ್ದು ಪತಿ – ಪತ್ನಿ ಇಬ್ಬರೂ ಪಾರಾಗಿದ್ದಾರೆ. 

Advertisement

ಜಡೇಜ ಅವರ ಕಾರಿನ ಹಿಂಭಾಗವು ಮೊಪೆಡ್‌ ಒಂದಕ್ಕೆ ಢಿಕ್ಕಿ ಹೊಡೆದಿದ್ದು ಯಾರ ತಪ್ಪಿನಿಂದಾಗಿ ಈ ಅಪಘಾತ ಸಂಭವಿಸಿತೆಂದು ಗೊತ್ತಾಗಿಲ್ಲ. 

ಮೊಪೆಡ್‌ ಚಲಾಯಿಸುತ್ತಿದ್ದ ತರುಣಿ ಪ್ರೀತಿ ಶರ್ಮಾ ಎಂಬಾಕೆಗೆ ಗಾಯಗಳಾಗಿದ್ದು ಜಡೇಜ ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಒಯ್ದಿದ್ದಾರೆ. ಈಕೆ ಜಾಮ್‌ ನಗರದ ವಿದ್ಯಾಸಾಗರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಕ್ಷಣ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

28ರ ಹರೆಯದ ಜಡೇಜ ಅವರನ್ನು ಪ್ರವಾಸಿ ಇಂಗ್ಲಂಡ್‌ ಎದುರಿನ 3 ಪಂದ್ಯಗಳ ಟಿ-20 ಸರಣಿಯಿಂದ ಹೊರಗಿಡಲಾಗಿದೆ. ಭಾರತ ಕಳೆದ ಗುರುವಾರ ಕಾನ್ಪುರದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಸೋತಿದೆ. 

Advertisement

Udayavani is now on Telegram. Click here to join our channel and stay updated with the latest news.

Next