ಅಹಮದಾಬಾದ್: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಟ ಸದ್ಯಕ್ಕೆ ಅಮಾನತಾಗಿದೆ. ಆಟಗಾರರೆಲ್ಲಾ ಮರಳಿ ತಮ್ಮ ಮನೆ ಕಡೆಗೆ ಹೋಗುತ್ತಿದ್ದಾರೆ. ಸದ್ಯ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲದೇ ಇರುವ ಕಾರಣ ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಫಾರ್ಮ್ ಹೌಸ್ ಗೆ ಮರಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಜಡೇಜಾ, ನನಗೆ ಅತ್ಯಂತ ಸುರಕ್ಷಿತವೆನಿಸುವ ಜಾಗಕ್ಕೆ ಬಂದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಯಶಸ್ವಿ ಜೈಸ್ವಾಲ್ ಗೆ ವಿಶೇಷ ಗಿಫ್ಟ್ ನೀಡಿದ ಜಾಸ್ ಬಟ್ಲರ್
ತನ್ನ ಪ್ರೀತಿಯ ಕುದುರೆಗಳ ಫೋಟೊವನ್ನು ಜಡೇಜಾ ಶೇರ್ ಮಾಡಿದ್ದಾರೆ. ಜಡೇಜಾರ ಕುದುರೆ ಪ್ರೀತಿ ಎಲ್ಲರಿಗೂ ತಿಳಿದಿರುವ ಸಂಗತಿ. ಸಮಯ ಸಿಕ್ಕಾಗೆಲ್ಲಾ ಜಡೇಜಾ ತಮ್ಮ ಕುದುರೆಗಳ ಜೊತೆ ಕಾಲ ಕಳೆಯುತ್ತಾರೆ.
ಕೆಲ ಆಟಗಾರರಿಗೆ ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಐಪಿಎಲ್ ಕೂಟವನ್ನು ಅಮಾನತು ಮಾಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಬಾಲಾಜಿ, ಮೈಕಲ್ ಹಸ್ಸಿ, ಬಸ್ ಕ್ಲೀನರ್ ಗೂ ಕೋವಿಡ್ ಸೋಂಕು ದೃಢವಾಗಿತ್ತು.