Advertisement

ಹುಕ್ಕಾ ಸೇವನೆ ಫೋಟೋ ಪ್ರಕಟಿಸಿ ಕ್ರಿಕೆಟಿಗ ಜಡೇಜ ವಿವಾದ

01:17 PM Dec 14, 2017 | Team Udayavani |

ನವದೆಹಲಿ: ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜ ವಿವಾದವೊಂದಕ್ಕೆ ಸಿಲುಕಿದ್ದಾರೆ. ಅದು ಅಂತಿಂಥ ವಿವಾದವಲ್ಲ. ತಮ್ಮ ಫಾರ್ಮ್ ಹೌಸ್‌ನಲ್ಲೇ ಕುಳಿತು ಹುಕ್ಕಾ ಸೇವಿಸಿದ  ಫೋಟೊ ವಿವಾದ. ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಬಾರೀ ಟೀಕೆಗೆ ಗುರಿಯಾಗಿದ್ದಾರೆ.

Advertisement

“ಬಾಲ್ಯವೆಲ್ಲ ಕತ್ತಲಲ್ಲಿ ಕಳೆಯಿತು. ಯೌವ್ವನ ಕಳ್ಳ ಕೆಲಸದಲ್ಲಿ ಕಳೆಯಿತು’ ಎಂದು ಅವರು ಟ್ವೀಟ್‌ ಕೆಳಗೆ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ತೀವ್ರ ಅಪಸ್ವರ ಕೇಳಿ ಬಂದಿದೆ. ನಿಮ್ಮನ್ನು ವಿರಾಟ್‌ ಕೊಹ್ಲಿ ಗಮನಿಸುತ್ತಿದ್ದಾರೆ ಸರ್‌.ಜಡೇಜ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ಮತ್ತೂಬ್ಬರು ನಿಮ್ಮ ಇಂತಹ ಫೋಟೋದಿಂದ ಸಮಾಜಕ್ಕೆ ತಪ್ಪು ಮಾಹಿತಿ ಹೋಗುತ್ತದೆ. ನಿಮಗೆ ಇದು ಶೋಭೆ ತರುವುದಿಲ್ಲ. ತುಂಬ ಕೆಟ್ಟದಾಗಿ ಕಾಣುತ್ತದೆ ಎಂದು ಜಡೇಜಗೆ ಹೇಳಿದ್ದಾರೆ. ಇನ್ನಷ್ಟು ಮಂದಿ ಇಂತಹುದೇ ಟ್ವೀಟ್‌ಗಳನ್ನು ಮಾಡಿ ಜಡೇಜಗೆ ಬುದ್ಧಿವಾದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next