ಟ್ರನಿಡಾಡ್: ವೆಸ್ಟ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಭಾರತವು ಇಂದು ಆಡಲಿದೆ. ಎರಡನೇ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಸರಣಿ ಸಮಬಲಗೊಂಡಿದ್ದು, ಸರಣಿ ಗೆಲ್ಲಲು ಇಂದಿನ ಪಂದ್ಯ ಗೆಲ್ಲಲು ಇಂದು ಗೆಲುವು ಅಗತ್ಯವಾಗಿದೆ.
ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಭಾರಿ ಪ್ರಯೋಗ ನಡೆಸಿತ್ತು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ ನಲ್ಲಿ ಪ್ರಯೋಗ ನಡೆಸಿದ್ದರೆ, ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ರೆಸ್ಟ್ ಕೊಟ್ಟು ಯುವಪಡೆಯನ್ನು ಆಡಿಸಲಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಕೈಕೊಟ್ಟು ಸೋಲಿಗೆ ಕಾರಣವಾಗಿತ್ತು.
ಈ ಪ್ರಯೋಗಗಳ ಕುರಿತು ಮಾತನಾಡಿದ ಆಲ್ ರೌಂಡರ್ ರವೀಂದ್ರ ಜಡೇಜಾ, “ಏಷ್ಯಾ ಕಪ್ ಮತ್ತು ವಿಶ್ವಕಪ್ ಗಿಂತ ಮೊದಲು ನಾವು ಪ್ರಯೋಗಗಳನ್ನು ಮಾಡಲು ಮತ್ತು ಸಂಯೋಜನೆಯನ್ನು ಬದಲಾಯಿಸಬಹುದಾದ ಏಕೈಕ ಸರಣಿ ಇದಾಗಿದೆ. ವಿಶ್ವಕಪ್ ಮತ್ತು ಏಷ್ಯಾ ಕಪ್ ನಲ್ಲಿ ನಾವು ಅನೇಕ ಪ್ರಯೋಗಗಳನ್ನು ಮಾಡಲು ಸಾಧ್ಯವಿಲ್ಲ” ಎಂದರು.
ಇದನ್ನೂ ಓದಿ:ಪತಿಯ ಬಳಿ ಹೇಳದೆ ಬಿಕಿನಿ ಫೋಟೋ ಪೋಸ್ಟ್ ಮಾಡಿದ ದೀಪಿಕಾ: ʼಎಚ್ಚರಿಕೆʼಯ ಕಮೆಂಟ್ ಮಾಡಿದ ಪತಿ
ಎರಡನೇ ಪಂದ್ಯದಲ್ಲಿ ಅನುಭವಿಗಳನ್ನು ಆಡಿಸದ ಕುರಿತು ಮಾತನಾಡಿದ ಜಡೇಜಾ, “ನಾವು ವಿಭಿನ್ನ ವಿಷಯಗಳನ್ನು ಮತ್ತು ಸಂಯೋಜನೆಗಳನ್ನು ಪ್ರಯತ್ನಿಸುತ್ತಿದ್ದೇವೆ. ಏಕೆಂದರೆ ಇದು ನಾವು ವಿಭಿನ್ನ ಬ್ಯಾಟಿಂಗ್ ಆರ್ಡರ್ ಗಳನ್ನು ಪ್ರಯತ್ನಿಸುವ ಸಮಯವಾಗಿದೆ” ಎಂದರು.
“ಯಾವ ಸಂಯೋಜನೆಯೊಂದಿಗೆ ಆಡಬೇಕೆಂದು ನಾಯಕ ಮತ್ತು ಮ್ಯಾನೇಜ್ ಮೆಂಟ್ ಗೆ ತಿಳಿದಿದೆ, ಆದ್ದರಿಂದ ಈ ಬಗ್ಗೆ ಯಾವುದೇ ಗೊಂದಲವಿಲ್ಲ” ಎಂದು ಅವರು ಹೇಳಿದರು.
“ನಮ್ಮ ಸೋಲಿಗೆ ಕಾರಣ ನಾವು ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸಿದ್ದಲ್ಲ, ಆದರೆ ವಿಕೆಟ್ ಪರಿಸ್ಥಿತಿಗಳು ಮೊದಲಾರ್ಧದಿಂದ ದ್ವಿತೀಯಾರ್ಧಕ್ಕೆ ಬದಲಾಯಿತು. ಒಂದು ಸೋಲು ಗೊಂದಲ ಅಥವಾ ಅನುಮಾನವನ್ನು ಸೃಷ್ಟಿಸುವುದಿಲ್ಲ” ಎಂದು ಜಡೇಜಾ ಹೇಳಿದರು.