ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವು ಶುಭಾರಂಭ ಮಾಡಿದೆ. ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡವು ಐದು ವಿಕೆಟ್ ಗಳ ಅಂತರದ ಸುಲಭ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಭಾರತದ ಬಿಗು ದಾಳಿಗೆ ನಲುಗಿ ಕೇವಲ 114 ರನ್ ಗಳಿಗೆ ಆಲೌಟಾದರೆ, ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಪಂದ್ಯ ಜಯಿಸಿತು.
ಈ ಪಂದ್ಯದಲ್ಲಿ ಭಾರತದ ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅಪರೂಪದ ದಾಖಲೆಯೊಂದನ್ನು ಬರೆದರು. ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ ಕಿತ್ತ ಈ ಜೋಡಿ ಪಂದ್ಯವೊಂದರಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಕಿತ್ತ ಭಾರತದ ಮೊದಲು ಎಡಗೈ ಸ್ಪಿನ್ನರ್ಸ್ ಎಂಬ ದಾಖಲೆ ಬರೆದರು.
ಈ ಪಂದ್ಯದಲ್ಲಿ ಮ್ಯಾಜಿಕಲ್ ಬೌಲಿಂಗ್ ನಡೆಸಿದ ಕುಲದೀಪ್ ಯಾದವ್ ಕೇವಲ ಆರು ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಮತ್ತೊಂದೆಡೆ ಕುಲದೀಪ್ ಯಾದವ್ ಅವರು 37 ರನ್ ನೀಡಿ ಮೂರು ವಿಕೆಟ್ ಪಡೆದರು. ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.