Advertisement

ಈಗ ಜಡೇಜ ವಿಶ್ವದಲ್ಲಿಯೇಶ್ರೇಷ್ಠ ಬೌಲರ್‌: ಸ್ಟೋಕ್ಸ್‌

03:15 PM Apr 02, 2017 | Team Udayavani |

ನವದೆಹಲಿ: ಸದ್ಯ ರವೀಂದ್ರ ಜಡೇಜ ವಿಶ್ವದಲ್ಲಿಯೇ ಶ್ರೇಷ್ಠ ಬೌಲರ್‌ ಎಂದು ಇಂಗ್ಲೆಂಡ್‌ನ‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಪ್ರಶಂಸಿಸಿದ್ದಾರೆ.

Advertisement

ಜಡೇಜ ಮತ್ತು ಆರ್‌. ಅಶ್ವಿ‌ನ್‌ ಬೌಲಿಂಗ್‌ ದಾಳಿಯನ್ನುಎದುರಿಸುವುದು ಕಷ್ಟ. ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿಯಲ್ಲಿ ಇದು ಸಾಬೀತಾಗಿದೆ. ಪಂದ್ಯದ ಮೂರು ಮತ್ತು ನಾಲ್ಕನೇ ದಿನ ಅವರ ಬೌಲಿಂಗ್‌ ದಾಳಿ ಎದುರಿಸುವುದೇ ಸವಾಲಾಗಿರುತ್ತದೆ ಎಂದು ತಿಳಿಸಿದ್ದಾರೆ. ಬೆನ್‌ ಸ್ಟೋಕ್ಸ್‌ ಈ ಬಾರಿ ಐಪಿಎಲ್‌ನಲ್ಲಿ 14.5 ಕೋಟಿ ರೂ.ಗೆ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡಕ್ಕೆ ಹರಾಜಾಗಿದ್ದಾರೆ. ಇಂಗ್ಲೆಂಡ್‌ ಪರ 32 ಟೆಸ್ಟ್‌, 53 ಏಕದಿನ ಪಂದ್ಯವನ್ನು ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next