Advertisement

ಹೆಬ್ಬೆರಳಿನ ಮೂಳೆ ಮುರಿತ : ಟೆಸ್ಟ್‌ ಸರಣಿಯಿಂದ ಜಡೇಜ ಔಟ್‌

11:59 PM Feb 10, 2021 | Team Udayavani |

ಹೊಸದಿಲ್ಲಿ: ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ರವೀಂದ್ರ ಜಡೇಜ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯ ಎದುರಿನ ಸಿಡ್ನಿ ಟೆಸ್ಟ್‌ ಪಂದ್ಯದ ವೇಳೆ ಅವರು ಹೆಬ್ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿದ್ದರು.

Advertisement

ಇನ್ನೂ ಗುಣಮುಖರಾಗದ ಕಾರಣ ಅವರನ್ನು ಅಂತಿಮ ಎರಡು ಟೆಸ್ಟ್‌ ಪಂದ್ಯಗಳ ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಜಡೇಜ ಬ್ರಿಸ್ಬೇನ್‌ನ ಅಂತಿಮ ಪಂದ್ಯದಿಂದಲೂ ಹೊರಗುಳಿದಿದ್ದರು. ಇಂಗ್ಲೆಂಡ್‌ ಎದುರಿನ ಮೊದಲೆರಡು ಟೆಸ್ಟ್‌ ಪಂದ್ಯಗಳಿಗೂ ಆಯ್ಕೆ ಆಗಿರಲಿಲ್ಲ. ಆದರೆ ಅಹ್ಮದಾಬಾದ್‌ನ ಕೊನೆಯ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಆಡಿಯಾರೆಂಬ ನಿರೀಕ್ಷೆ ಇತ್ತು. ಇದು ಹುಸಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next