ರವೀಂದ್ರನಾಥ್ ಶಾನಭಾಗ್! ಕಳೆದ ವರ್ಷ ತಮಗೆ ಬಂದಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ಯೋಗ್ಯ ಕಾರಣ ನೀಡಿ, ತಿರಸ್ಕರಿಸಿದ ಈ ವ್ಯಕ್ತಿಯ ಬಗ್ಗೆ ನಾಡಿಗೆ ಒಂದು ಕುತೂಹಲ ಇದ್ದೇ ಇದೆ. ಕಳೆದ 40 ವರ್ಷಗಳಿಂದ ಇವರು ಅನ್ಯಾಯಕ್ಕೊಳಗಾದವರ ಪರ ನಿಂತು, ವಾದ ಹೂಡಿ, ಕೋರ್ಟು ಕಚೇರಿಗಳನ್ನು ಅಲೆದು, ಅಸಂಖ್ಯ ನೊಂದ ಜೀವಗಳಿಗೆ ದಾರಿದೀಪವಾಗಿದ್ದಾರೆ.
ಗ್ರಾಹಕರ ಸಮಸ್ಯೆಗಳು- ಕಾನೂನಿನ ಒಗಟುಗಳನ್ನು ಸರಳವಾಗಿ ಹೇಗೆ ಬಿಡಿಸುವುದು ಎನ್ನುವುದನ್ನು ರವೀಂದ್ರನಾಥರ ಮಾತುಗಳಲ್ಲೇ ಕೇಳುವ ಸದಾವಕಾಶ ಈಗ ಒದಗಿಬಂದಿದೆ. ಅವರೊಂದಿಗೆ ಮುಖಾಮುಖೀ ಕಾರ್ಯಕ್ರಮವನ್ನು ಆಪ್ತಬಳಗ ಹಮ್ಮಿಕೊಂಡಿದೆ.
ನಮ್ಮ ವ್ಯವಸ್ಥೆ ಹಾಗಿದೆ, ಹೀಗಿದೆ ಎಂದು ತಲೆಮೇಲೆ ಕೈಹೊತ್ತು ಕೂರುವ ಮುನ್ನ, ಅವನ್ನೆಲ್ಲ ಎದುರಿಸುವುದು ಹೇಗೆ? ಅಹಿಂಸೆಯಿಂದ ಪರಿಹಾರ ಕಂಡುಕೊಳ್ಳುವ ಬಗೆಯೆಂತು? ಈ ಕುರಿತು ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ.
ಅಂದಹಾಗೆ, ಪುಣೆಯ ವಾಸಿಯಾಗಿರುವ ರವೀಂದ್ರರು, ಗೆದ್ದ ಕೇಸುಗಳ ಸಂಖ್ಯೆಯೇ 36 ಸಾವಿರ! ಇವರು ಗೆದ್ದ ಅತಿಮಹತ್ವದ ಕೇಸುಗಳನ್ನು ದೇಶದ ಅತ್ಯುನ್ನತ ಕಾನೂನು ಕಾಲೇಜುಗಳು ಅಧ್ಯಯನ ನಡೆಸುತ್ತಿವೆ. ಪುಣೆ ವಿವಿ, ಇವರ ಕೇಸುಗಳ ಅಧ್ಯಯನಕ್ಕೆ ಒಂದು ವಿಭಾಗವನ್ನೇ ತೆರೆದಿದೆ ಎನ್ನುವುದು ವಿಶೇಷ.
ಯಾವಾಗ?: ಜ.14, ಭಾನುವಾರ, ಬೆ.10ಕ್ಕೆ
ಎಲ್ಲಿ?: ಸಂಸ್ಕೃತಿ ಕೇಂದ್ರ, 6ನೇ ಅಡ್ಡರಸ್ತೆ, ಮಲ್ಲೇಶ್ವರ